ಪಿಯುಸಿ ದಾಖಲಾತಿಗೆ ಅವಧಿ ವಿಸ್ತರಣೆ

Update: 2021-10-18 16:31 GMT

ಬೆಂಗಳೂರು, ಅ.18: 2021-22ನೇ ಸಾಲಿನ ಪ್ರಥಮ ಪಿಯುಸಿ ತರಗತಿಗೆ ದಾಖಲಾತಿ ದಂಡಸಹಿತ ದಿನಾಂಕವನ್ನು ಇದೇ ಅ.23ರವರೆಗೂ ವಿಸ್ತರಿಸಲಾಗಿದೆ. ಕಳೆದ ಬಾರಿ ಚುನಾಯಿತ ಪ್ರತಿನಿಧಿಗಳ, ಶಾಲಾ ಪ್ರಾಂಶುಪಾಲರ ಮತ್ತು ಪೋಷಕರ ಮನವಿಯ ಮೇರೆಗೆ ದಾಖಲಾತಿ ದಿನಾಂಕವನ್ನು ಅ.19ರವರೆಗೂ ವಿಸ್ತರಿಸಲಾಗಿತ್ತು. ಆದರೆ ಈಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. 

ಮಾರ್ಗಸೂಚಿಗಳ ಅನ್ವಯ ದಾಖಲಾತಿ ಶುಲ್ಕವನ್ನು ಸಂಗ್ರಹಿಸುವುದು. ಸಂಗ್ರಹಿಸಿದ ಶುಲ್ಕವನ್ನು ಇಲಾಖೆ ಅಥವಾ ಸರಕಾರಿ ಖಜಾನೆಗೆ ಕಡ್ಡಾಯವಾಗಿ ಜಮೆ ಮಾಡುವುದು ಪ್ರಾಂಶುಪಾಲರ ಮತ್ತು ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ ಎಂದು ಇಲಾಖೆಯು ಆದೇಶದಲ್ಲಿ ಸ್ವಷ್ಟಪಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News