ರಾಮನಗರ; ಇಸ್ಲಾಂ, ಪ್ರವಾದಿ ಬಗ್ಗೆ ಅವಹೇಳನಾಕಾರಿ ಬರಹ ; ಪ್ರೊಫೆಸರ್ ವಿರುಧ್ದ ಸಿಎಫ್ ಐ ನಿಂದ ದೂರು

Update: 2021-10-18 17:53 GMT

ರಾಮನಗರ: ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಅನ್ವಯಗೊಂಡ ಬಿಎಡ್ ಮೂರನೇ ಸೆಮಿಸ್ಟರ್ ಮೌಲ್ಯಾಧಾರಿತ ಶಿಕ್ಷಣದ ಹೆಸರಿನಲ್ಲಿರುವ ಪಠ್ಯಪುಸ್ತಕದಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಂಮರ , ಪ್ರವಾದಿ ಮುಹಮ್ಮದ್ (ಸ) ರವರ ಕುರಿತು ಪೂರ್ವಗ್ರಹಪೀಡಿತ, ಅವಹೇಳನಾಕಾರಿ ಅಂಶಗಳನ್ನು ತುರುಕಿದ್ದು, ಲೇಖಕರಾದ ಬಿಆರ್ ರಾಮಚಂದ್ರಯ್ಯರವರ ವಿರುಧ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಮನಗರ ಜಿಲ್ಲಾ ಸಮಿತಿಯು ರಾಮನಗರ  ಪಟ್ಟಣ ಠಾಣೆಗೆ ದೂರು ದಾಖಲಿಸಿದರು. 

ತುಮಕೂರಿನ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕ ಬಿ.ಆರ್ ರಾಮಚಂದ್ರಯ್ಯ ಎಂಬವರು ಬರೆದಿರುವ ಮೈಸೂರಿನ ವಿಸ್ಮಯ ಪ್ರಕಾಶನ ಪ್ರಕಟಿಸಿರುವ "ಮೌಲ್ಯ ದರ್ಶನ ದಿ ಎಸ್ಸೆನ್ಸ್ ಆಫ್ ವ್ಯಾಲ್ಯೂ ಎಜುಕೇಶನ್" ಎಂಬ ಆಂಗ್ಲ ಕೃತಿಯಲ್ಲಿ ಇಸ್ಲಾಂ, ಮುಸ್ಲಿಂಮರನ್ನು ಮತ್ತು ಪ್ರವಾದಿ ಮುಹಮ್ಮದ್ (ಸ) ರವರನ್ನು ನಿಂದಿಸಲಾಗಿದೆ. ಈ ಕೃತಿಯನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಕೂಡ ಬಿಎಡ್ ಮೂರನೇ ಸೆಮಿಸ್ಟರ್ ಪಠ್ಯಪುಸ್ತಕವಾಗಿ ಆಯ್ಕೆಮಾಡಿಕೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

ಉದ್ದೇಶಪೂರ್ವಕರಾಗಿ ಕೋಮುಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಲೇಖಕ ಹಾಗೂ ಪ್ರಕಾಶಕರ ವಿರುಧ್ದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಮನಗರ ಜಿಲ್ಲಾ ಪಟ್ಟಣ ಪೊಲೀಸ್ ಠಾಣೆಯ ಸಹಾಯಕ  ಸಬ್-ಇನ್ಸ್ಪೆಕ್ಟರ್  ರಿಗೆ ದೂರು ದಾಖಲಿಸಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ರಾಮನಗರ  ಜಿಲ್ಲಾ ಕಾರ್ಯದರ್ಶಿ ಅರ್ಬಾಜ್ ಖಾನ್ ಮತ್ತು ಸದಸ್ಯ ನವಾಜ್  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News