ಕಲಬುರಗಿ: ಅಕ್ರಮವಾಗಿ ಸಾಗಿಸುತ್ತಿದ್ದ 9 ಟನ್ ಚರ್ಮ ಜಪ್ತಿ
Update: 2021-10-19 23:14 IST
ಕಲಬುರಗಿ, ಅ.19: ಅಕ್ರಮವಾಗಿ ಟ್ರಕ್‍ನಲ್ಲಿ ಸಾಗಿಸುತ್ತಿದ್ದ 9 ಟನ್ ಚರ್ಮವನ್ನು ಕಲಬುರಗಿ ನಗರದ ನರೋಣಾ ಠಾಣಾ ಪೊಲೀಸರು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ.
ರಾಜ್ಯ ಪ್ರಾಣಿ ಕಲ್ಯಾಣ ಅಭಿವೃದ್ಧಿ ಮಂಡಳಿ ಸದಸ್ಯ ಹುಣಚಿರಾಯ ಮೋಟಗಿ ಅವರು ನೀಡಿದ ದೂರಿನ ಮೇರೆಗೆ ನರೋಣಾ ಠಾಣೆ ಪೊಲೀಸರು ದಾಳಿ ನಡೆಸಿ ಕಡಗಂಚಿ ಕ್ರಾಸ್‍ನಲ್ಲಿ ಟ್ರಕ್ ಜಪ್ತಿ ಮಾಡಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.