ಕೊಡಗಿನ ಯುವಕ ಮಧ್ಯಪ್ರದೇಶದಲ್ಲಿ ಆತ್ಮಹತ್ಯೆ
Update: 2021-10-20 15:02 IST
ಮಡಿಕೇರಿ ಅ.20: ಮಧ್ಯ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದ ಪೊನ್ನಂಪೇಟೆಯ ಸುಳುಗೋಡು ಗ್ರಾಮದ ಯುವಕನೊಬ್ಬ ಆತ್ಮಹತ್ಯೆಗೈದಿರುವ ಘಟನೆ ವರದಿಯಾಗಿದೆ.
ಸುಳುಗೋಡು ನಿವಾಸಿ ಗುತ್ತಿಗೆದಾರ ಶಿವದಾಸ್ ಎಂಬುವವರ ಪುತ್ರ ದರ್ಶನ್ (28) ಮೃತಪಟ್ಟ ಯುವಕ. ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗಿದೆ.
ಪ್ರೀತಿಸುತ್ತಿದ್ದ ಯುವತಿ ವಿವಾಹ ನಿರಾಕರಿಸಿ ಬೇರೊಬ್ಬನನ್ನು ಪ್ರೀತಿಸಲು ಆರಂಭಿಸಿದ್ದರಿಂದ ಮನನೊಂದ ದರ್ಶನ್ ಆತ್ಮಹತ್ಯೆಗೈದಿರುವುದಾಗಿ ತಿಳಿದು ಬಂದಿದೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ. ಮೃತದೇಹವನ್ನು ಸುಳುಗೋಡು ಗ್ರಾಮಕ್ಕೆ ತರಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.