ಉತ್ತರಾಖಂಡ ಪ್ರವಾಹ; ರಾಜ್ಯದ 60 ಮಂದಿ ಸುರಕ್ಷಿತ

Update: 2021-10-20 15:53 GMT

ಬೆಂಗಳೂರು, ಅ.20: ಉತ್ತರಾಖಂಡ್ ಪ್ರವಾಹ ಹಿನ್ನೆಲೆ ಅಲ್ಲಿಗೆ ತೆರಳಿದ್ದ ರಾಜ್ಯದ 60 ಜನ ಸುರಕ್ಷಿತ ಎಂದು ವರದಿಯಾಗಿದೆ.

ಚಾರ್‍ಗಾಂಗ್, ಗಂಗಾಘಟ್, ಸೂನ್‍ನಲ್ಲಿ ಕೆಲವರು ಸಿಲುಕಿದ್ದಾರೆ. ವಿದ್ಯುತ್ ಕಡಿತ ಹಿನ್ನೆಲೆಯಲ್ಲಿ ಕರೆ ಮಾಡಲು ಆಗಿಲ್ಲ. ಸದ್ಯಕ್ಕೆ 60 ಜನ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಗೊತ್ತಾಗಿದೆ.

ಎರಡು ದಿನಗಳಲ್ಲಿ ಎಲ್ಲರೂ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಒಟ್ಟು 60 ಜನ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಮುಖ್ಯವಾಗಿ ಬೀದರ್‍ನಿಂದ ಉತ್ತರಾಖಂಡಕ್ಕೆ ತೆರಳಿದ್ದ 30 ಜನ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. 

ಸಹಾಯವಾಣಿ ಆರಂಭ: ಉತ್ತರಾಖಂಡ್‍ನಲ್ಲಿ ಜಲಪ್ರಳಯ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಹಾಯವಾಣಿ ಆರಂಭಿಸಲಾಗಿದೆ. 
ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದು, ಉತ್ತರಾಖಂಡ್‍ನಲ್ಲಿ ಸಿಲುಕಿರುವ ಕನ್ನಡಿಗರು ಅಥವಾ ಅವರ ಸಂಬಂಧಿಕರು ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಉತ್ತರಾಖಂಡ್ ನೆರೆಯಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ನೀಡಬಹುದು. ಅದನ್ನು ಅಲ್ಲಿನ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟವರಿಗೆ ಕಾರ್ಯಾಚರಣೆಗೆ ಸಹಾಯವಾಗುವಂತೆ ಕಳುಹಿಸಿಕೊಡಲಾಗುತ್ತದೆ. ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸಹಾಯವಾಣಿ
ಕರ್ನಾಟಕದ ತುರ್ತು ಸಹಾಯವಾಣಿ ಸಂಖ್ಯೆ: 080–1070 ಅಥವಾ 080–2234 0676 ಅನ್ನು ಸಂತ್ರಸ್ತರು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News