ಬಾಲಕನಿಗೆ ಚಿಕಿತ್ಸೆ ಒದಗಿಸಲು ಕೋರಿ ಹೈಕೋರ್ಟ್ ಗೆ ಅರ್ಜಿ: ತಜ್ಞರ ವರದಿ ಹಿನ್ನೆಲೆಯಲ್ಲಿ ಕಾಲಾವಕಾಶ ಕೋರಿದ ಸರಕಾರ

Update: 2021-10-21 15:19 GMT

ಬೆಂಗಳೂರು, ಅ.21: ಅಪರೂಪದ ಕಾಯಿಲೆಯಾದ 'ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ'ನಿಂದ(ಬೆನ್ನು ಮೂಳೆಗೆ ಸಂಬಂಧಿಸಿದ ಕಾಯಿಲೆ) ಬಳಲುತ್ತಿರುವ ಬಾಲಕನಿಗೆ ಚಿಕಿತ್ಸೆ ಒದಗಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ  ಚಿಕಿತ್ಸೆಗೆ ತಜ್ಞರ ವರದಿ ಕೇಳಲಾಗಿದ್ದು, 10 ದಿನ ಕಾಲಾವಕಾಶ ನೀಡಬೇಕೆಂದು ಸರಕಾರ ಹೈಕೋರ್ಟ್‍ಗೆ ಮನವಿ ಮಾಡಿದೆ.   

ಈ ವೇಳೆ ನ್ಯಾಯಪೀಠ, ಶೀಘ್ರ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದೆ. ಪ್ರತಿ ಮಗು ಜಗತ್ತಿಗೆ ಸಂತಸ ತರುತ್ತದೆ. ಹೀಗಾಗಿ ಮಗುವಿನ ಕ್ಷೇಮ ಪರಿಗಣಿಸಬೇಕಿದೆ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ. ಅರ್ಜಿ ವಿಚಾರಣೆಯನ್ನು ಅ.29ಕ್ಕೆ ನಿಗದಿಪಡಿಸಿದೆ.

ಮಗು ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಕಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ 16 ಕೋಟಿ ರೂಪಾಯಿ ಮೌಲ್ಯದ  ಔಷಧ ಆಮದು ಅಗತ್ಯ ಇದ್ದು, ಈವರೆಗೆ 8.24 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹಣಕಾಸಿನ ನೆರವಿಗೆ ನಿರ್ದೇಶನ ಕೋರಿರುವ ಜನೀಶ್, ವಕೀಲ ಪ್ರಿನ್ಸ್ ಐಸಾಕ್‍ರಿಂದ ಹೈಕೋರ್ಟ್‍ಗೆ ಮನವಿ ಮಾಡಿದ್ದಾರೆ.

ಏನಿದು ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಡಿಸೀಸ್: ದೇಹದ ಮಾಂಸ ಖಂಡಗಳ ಹಿಡಿತ ಸಾಧಿಸೋ ನರಗಳು ಶಕ್ತಿಹೀನವಾದ ಅಥವಾ ದುರ್ಬಲವಾದ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆ ಆಗಿದೆ. ಜೀನ್‍ಗಳಲ್ಲಿ ಉಂಟಾಗುವ ಒಂದು ಸಣ್ಣ ಬದಲಾವಣೆ ಈ ಕಾಯಿಲೆಗೆ ಕಾರಣ ಎಂದು ವೈದ್ಯರು ತಿಳಿಸಿದ್ದು, ಇದು ಹುಟ್ಟಿನಿಂದಲೇ ಬರುವ ಜೆನಿಟಿಕ್ ಕಾಯಿಲೆಯಾಗಿದೆ. ಈ ರೋಗಕ್ಕೆ ಅಮೆರಿಕದಲ್ಲಿ ಔಷಧಿ ತಯಾರಾಗಿದೆ. ಈ ಔಷಧಿಯನ್ನು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿಯಿಂದ ಬಳಲುವ ಮಕ್ಕಳಿಗೆ ಕೊಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News