ಮಡಿಕೇರಿ; ಕಾರು, ಟಿಪ್ಪರ್ ಢಿಕ್ಕಿ

Update: 2021-10-22 14:22 GMT

ಮಡಿಕೇರಿ ಅ.22 : ಕಲ್ಲು ತುಂಬಿದ ಟಿಪ್ಪರ್ ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ರಸ್ತೆಗೆ ಮಗುಚಿದ ಘಟನೆ ಕೆದಕಲ್ ನಲ್ಲಿ ನಡೆದಿದೆ.

 ಸುಂಟಿಕೊಪ್ಪದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಮಡಿಕೇರಿಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಈ ಸಂದರ್ಭ ಟಿಪ್ಪರ್ ಲಾರಿ ರಸ್ತೆಯ ಮಧ್ಯಭಾಗದಲ್ಲಿಯೇ ಮಗುಚಿಕೊಂಡಿತು. ಅದೃಷ್ಟವಶಾತ್ ಲಾರಿ ಮತ್ತು ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಲಾರಿಯಲ್ಲಿ ತುಂಬಿದ್ದ ಕಲ್ಲುಗಳು ರಸ್ತೆಯಲ್ಲಿ ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News