‘ಕನ್ನಡಕ್ಕಾಗಿ ನಾವು' ರಾಜ್ಯಾದ್ಯಂತ ವಿಶೇಷ ಕಾರ್ಯಕ್ರಮ: ಸಚಿವ ಸುನೀಲ್ ಕುಮಾರ್

Update: 2021-10-22 14:36 GMT

ಬೆಂಗಳೂರು, ಅ. 22: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಒಂದು ವಾರಗಳ ಕಾಲ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನವನ್ನು ರಾಜ್ಯಾದ್ಯಂತ ಆಚರಿಸಲು ನಿರ್ಧರಿಸಲಾಗಿದೆ.

ಶುಕ್ರವಾರ ಈ ಅಭಿಯಾನದ ಅಂಗವಾಗಿ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳ ವಿವರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್, ‘ಮಾತಾಡ್ ಮಾತಾಡ್ ಕನ್ನಡ' ಎನ್ನುವ ಘೋಷ ವಾಕ್ಯದ ಅಡಿಯಲ್ಲಿ ಈ ಎಲ್ಲ್ಲ ಕಾರ್ಯಕ್ರಮಗಳು ನಡೆಯಲಿವೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಅಭಿಯಾನದ ಹಿನ್ನೆಲೆಯಲ್ಲಿ ನಿರಂತರ ಕಾಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಕಾರ್ಯಕ್ರಮದ ವಿವರಗಳನ್ನು ನೀಡಿದರು.

ಅ.24 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10ಗಂಟೆಗೆ ಮೈಸೂರು ರಂಗಾಯಣದಿಂದ ಡಾ. ಎಸ್.ಎಲ್.ಬೈರಪ್ಪನವರ ಪರ್ವ ನಾಟಕ ಪ್ರದರ್ಶನವಾಗಲಿದೆ. ಬೆಂಗಳೂರು ನಾಟಕ ಅಕಾಡಮಿಯಿಂದ ಜಾಲಹಳ್ಳಿಯ ಬಿಇಎಲ್ ರಂಗಮಂದಿರದಲ್ಲಿ ರಂಗಪಯಣ ಪ್ರಸ್ತುತಪಡಿಸುವ ‘ಗುಲಾಬಿ ಗ್ಯಾಂಗ್' ನಾಟಕ ನಡೆಯಲಿದೆ.   

ಅ.25ರ ಸಂಜೆ 5 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮೂಕನಮಕ್ಕಳು ನಾಟಕ ಪ್ರದರ್ಶನವಾಗಲಿದೆ. ಮಲ್ಲೇಶ್ವರಂನ ಎಮ್‍ಇಎಸ್ ಕಾಲೇಜ್ ಸಭಾಭವನದಲ್ಲಿ ದೃಶ್ಯಕಾವ್ಯ ಪ್ರಸ್ತುತಪಡಿಸುವ ಮಾಯಾಬೇಟೆ ನಾಟಕ ಪ್ರದರ್ಶನವಾಗಲಿದೆ. ಅ.26ರ ಸಂಜೆ 6.30ಕ್ಕೆ ಶಿವಮೊಗ್ಗ ರಂಗಾಯಣದವರಿಂದ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ ಚಾಣಕ್ಯಪ್ರಪಂಚ, ದಾವಣಗೆರೆ ವೃತಿ ರಂಗಾಯಣದಿಂದ ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ರಾಶಿ ಚಕ್ರ, ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಸ್ತುತ ಪಡಿಸುವ ಶಿವರಾತ್ರಿ ನಾಟಕ ಹಾಗೂ ಮೈಸೂರು ರಂಗಾಯಣದಿಂದ ಪೀಣ್ಯದ ಬಿಇಎಲ್‍ನಲ್ಲಿ ಮೂಕನಮಕ್ಕಳು ನಾಟಕ ಪ್ರದರ್ಶನಗೊಳ್ಳಲಿದೆ.

ಅ.27ರ ಸಂಜೆ 6.30ಕ್ಕೆ ಮೈಸೂರು ರಂಗಾಯಣದಿಂದ ಬೆಂಗಳೂರಿನ ಕಲ್ಯಾಣ ನಗರದ ಡಾ.ಶಿವಕುಮಾರಸ್ವಾಮಿ ಜ್ಞಾನಸೌಧದಲ್ಲಿ ಮೂಕನಮಕ್ಕಳು, ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ ದಾವಣಗೆರೆ ವೃತಿ ರಂಗಾಯಣದವರಿಂದ ಕನ್ನಡ ಕಲಿಯೋಣ ಬಾನಾಟಕ, ಧಾರವಾಡ ರಂಗಾಯಣದವರಿಂದ ಮಲ್ಲೇಶ್ವರಂ ಕುವೆಂಪು ಸಭಾಂಗಣದಲ್ಲಿ ಕತ್ತಲೆಯ ಕೊರೋನ ನಾಟಕ ಪ್ರದರ್ಶನ ನಡೆಯಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಮೆಜೆಸ್ಟಿಕ್ ಆರ್‍ಎಂಎಸ್ ಕನ್ನಡಸಂಘದಲ್ಲಿ ಮಹದೇವಯ್ಯ ತಂಡದವರಿಂದ ಸುಗಮಸಂಗೀತ ಕಾಯಕ್ರಮ ನಡೆಯಲಿದೆ. 

ಅ.28ರ ಸಂಜೆ 6.30ಕ್ಕೆ ಧಾರವಾಡ ರಂಗಾಯಣದವರಿಂದ ಕುರುಬರಹಳ್ಳಿಯ ರಾಜ್‍ಕುಮಾರ ಸಭಾಂಗಣದಲ್ಲಿ ಕತ್ತಲೆ ಕೊರೋನ ನಾಟಕ, ಸುಚಿತ್ರ ಫಿಲಂ ಸೋಸೈಟಿಯಲ್ಲಿ ಶ್ರದ್ಧ ಮತ್ತು ಸ್ಟೇನ್ಲೆಸ್‍ಸ್ಟೀಲ್ ಪಾತ್ರೆಗಳು ನಾಟಕ, ಕಲಬುರಗಿ ರಂಗಾಯಣದವರಿಂದ ಆರ್ಪಿಸಿ ಬಡಾವಣೆಯ ಗ್ರಂಥಾಲಯ ಸಭಾಂಗಣದಲ್ಲಿ ಸಿರಿ ಪುರಂದರ ನಾಟಕ ನಡೆಯಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ರಾಜಾಜಿನಗರದ ಬಾಲಮೋಹನ ವಿದ್ಯಾಲಯದಲ್ಲಿ ಎಚ್.ಎನ್.ಮೀರಾ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಅ.29ರ ಸಂಜೆ 6.30ಕ್ಕೆ ಧಾರವಾಡ ರಂಗಾಯಣದವರಿಂದ ಬ್ಯಾಟರಾಯನಪುರ ನಗರಸಭಾ ಸಭಾಂಗಣದಲ್ಲಿ ಕತ್ತಲೆ ಕೊರೋನ ನಾಟಕ, ಕಲಬುರಗಿ ರಂಗಾಯಣದಿಂದ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ಸಿರಿ ಪುರಂದರ ನಾಟಕಗಳು ನಡೆಯಲಿದೆ. ಕರ್ನಾಟಕ ಸಂಗೀತನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ವಿಜಯನಗರದ ಕರ್ನಾಟಕ ವಿದ್ಯುತ್ ಕಾರ್ಖಾನೆ ಸಂಘದಲ್ಲಿ ಸವಿಗಾನಲಹರಿ ಸಂಗೀತ ಕಾರ್ಯಕ್ರಮ ಜರುಗಲಿದೆ. 

ಅ.30ರಂದು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರಿಂದ ಕಾಮಾಕ್ಷಿಪಾಳ್ಯದ ರಾಘವೇಂದ್ರ ಆಡಿಟೋರಿಯಂನಲ್ಲಿ ಕಾನಿನ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ. ಕರ್ನಾಟಕ ಸಂಗೀತನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಕುಮಾರಸ್ವಾಮಿ ಲೇಔಟ್‍ನ ಕೇಂದ್ರ ಗ್ರಂಥಾಲಯದಲ್ಲಿ ಕನ್ನಡ ಗೀತೆಗಳು ಎನ್ನುವ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.31ಕ್ಕೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಮಲ್ಲೇಶ್ವರಂನ ಸೇವಾಸದನದಲ್ಲಿ ಕನ್ನಡ ಗೀತೆಗಳಿಗೆ ನೃತ್ಯ ಕಾಯಕ್ರಮ ನಡೆಯಲಿದೆ ಎಂದು ಸಚಿವ ಸುನೀಲ್ ಕುಮಾರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News