ರಂಗ ಕಲಾವಿದ ಸಿ.ಎಂ.ತಿಮ್ಮಯ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಗ್ರಹ

Update: 2021-10-22 15:50 GMT

ಬೆಂಗಳೂರು, ಅ. 22: ಹಿರಿಯ ರಂಗಭೂಮಿ ಕಲಾವಿದ, ನಟ, ನಿರ್ದೇಶಕ, ರಂಗ ಸಂಘಟಕ ಹಾಗೂ ಹೋರಾಟಗಾರರೂ ಆಗಿರುವ ಸಿ.ಎಂ.ತಿಮ್ಮಯ್ಯ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು ಎಂದು ಮಹಾತ್ಮ ಜ್ಯೋತಿಬಾಫುಲೆ ಸೇವಾ ಟ್ರಸ್ಟ್ ಆಗ್ರಹಿಸಿದೆ.

ಸುಮಾರು 40 ವರ್ಷಗಳಿಂದ ಸಿ.ಎಂ.ತಿಮ್ಮಯ್ಯ ಅವರು ವಿ.ಕೆ.ಎಂ. ಕಲಾವಿಧರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ, ಅಲ್ಲದೆ ಸ್ವತಃ ನಟರಾಗಿ ದಿಲ್ಲಿ, ಮುಂಬೈ, ಲಕ್ನೋ, ಕೊಲ್ಕತ್ತಾ, ಕಾಸರಗೋಡು, ಅಂಡಮಾನ್ ಸಹಿತ ವಿವಿಧೆಡೆಗಳಲ್ಲಿ ಯಶಸ್ವಿ ರಂಗ ಪ್ರಯೋಗಗಳನ್ನು ಮಾಡುವ ಮೂಲಕ ಕನ್ನಡ ಮತ್ತು ಸಂಸ್ಕøತಿ ಉಳಿವಿಗೆ ಶ್ರಮಿಸಿದ್ದಾರೆ.

ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳು ಸೇರಿದಂತೆ ರಂಗಭೂಮಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ತಿಮ್ಮಯ್ಯ ಅವರು, ಅತ್ಯಂತ ತುಳಿತಕ್ಕೆ ಒಳಗಾಗಿರುವ ಸಮುದಾಯದಲ್ಲಿ ಹುಟ್ಟಿದ್ದರೂ, ನಾಡು-ನುಡಿ, ಕಲೆ, ಸಾಹಿತ್ಯ, ಸಂಸ್ಕøತಿ ಉನ್ನತಿಗಾಗಿ ಶ್ರಮಿಸಿದ್ದಾರೆ. ಇಂತಹ ಅಪರೂಪದ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ ಎಂದು ಟ್ರಸ್ಟ್‍ನ ಮುಖ್ಯಸ್ಥ ಆನಂದ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News