ಆರೆಸ್ಸೆಸ್ ಕಾರ್ಯಕರ್ತನ ವಿರುದ್ಧ ದೂರು ನೀಡಿದ್ದ ಕಾರ್ಯಕರ್ತನನ್ನೇ ಉಚ್ಛಾಟಿಸಿದ ಕಾಂಗ್ರೆಸ್

Update: 2021-10-22 16:35 GMT

ಬಾಗಲಕೋಟೆ, ಅ.22: ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ದೂರು (ಎಫ್‍ಐಆರ್) ದಾಖಲಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತನನ್ನು

ಉಚ್ಛಾಟನೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 

ಅ.17ರಂದು ಬಾಗಲಕೋಟೆಯಲ್ಲಿ ಆರೆಸ್ಸೆಸ್ ಪಥಸಂಚಲನ ನಡೆಸಿತ್ತು. ಈ ವೇಳೆ ತಮ್ಮ ವಿರುದ್ಧ ಜಾತಿ ನಿಂದನೆ, ಅಶ್ಲೀಲ ಪದ ಬಳಕೆ ಮಾಡಿದ್ದಾಗಿ ಫಕೀರಪ್ಪ ಮಾದರ ಬಾಗಲಕೋಟೆಯ ಶಹರ ಠಾಣೆಗೆ ನಾಲ್ವರು ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದರು. 

ಆರೆಸ್ಸೆಸ್ ಕಾರ್ಯಕರ್ತರಾದ ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ಅಶೋಕ ಮುತ್ತಿನಮಠ, ರಾಜು ಗೌಳಿ ವಿರುದ್ಧ ಬಾಗಲಕೋಟೆ ಶಹರ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಆದರೆ ಬಿಜೆಪಿ ಪಕ್ಷದ ಆಂತರಿಕ ಕಲಹದಲ್ಲಿ ಮೂಗು ತೂರಿಸಿದ್ದಕ್ಕಾಗಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಜು ಮನ್ನಿಕೇರಿ ಅವರು ಫಕೀರಪ್ಪರನ್ನು ಉಚ್ಛಾಟನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News