ಉಚಿತ ಟ್ಯಾಬ್ಲೆಟ್ ಪಿ.ಸಿಗಳ ಹಂಚಿಕೆಗೆ ಮಾಹಿತಿ ಒದಗಿಸಿ: ಉನ್ನತ ಶಿಕ್ಷಣ ಇಲಾಖೆ ಆದೇಶ

Update: 2021-10-22 17:23 GMT

ಬೆಂಗಳೂರು, ಅ.22 : 2020-21ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಥಮ ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿ.ಸಿಗಳನ್ನು ಹಂಚಿಕೆಯ ಕುರಿತಾಗಿ ಅ.25ರ ಒಳಗಾಗಿ ಕೇಂದ್ರ ಕಚೇರಿಗೆ ಮಾಹಿತಿಯನ್ನು ಗೂಗಲ್ ಫಾರಂನಲ್ಲಿ ಸಲ್ಲಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.  

ಈ ಹಿಂದೆ ಅ.07 ರೊಳಗಾಗಿ ಪೋರ್ಟಲ್ ನಲ್ಲಿ ಅಪ್ ಡೇಟ್ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕಾಲೇಜುಗಳ ಪ್ರಾಂಶುಪಾಲರಿಗೆ ಕಟ್ಟು ನಿಟ್ಟಾಗಿ ಸೂಚಿಸಲಾಗಿತ್ತು. ಆದರೆ ರಾಜ್ಯದ 111 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಂದ ಅಗತ್ಯ ಮಾಹಿತಿಗಳು ಪೆÇೀರ್ಟಲ್ ನಲ್ಲಿ ಅಪ್ ಲೋಡ್ ಆಗಿರುವುದಿಲ್ಲ. ಜೊತೆಗೆ ಗೂಗಲ್ ಫಾರಂನಲ್ಲಿ ದಾಖಲೆಗಳು ಅಪ್ ಲೋಡ್ ಮಾಡಲಾಗಿರುವುದಿಲ್ಲ. ಈ ಕುರಿತಂತೆ ದೂರವಾಣಿಯ ಮೂಲಕ ಕಾಲೇಜುಗಳನ್ನು ಅನೇಕ ಬಾರಿ ಸಂಪರ್ಕಿಸಲಾಗಿದ್ದರೂ ಕೂಡ ಮಾಹಿತಿ, ದಾಖಲೆಗಳನ್ನು ಅಪ್‍ಲೋಡ್ ಮಾಡದಿರುವುದನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಅದುದರಿಂದ ಅ.25ರ ಒಳಗಾಗಿ ಕೇಂದ್ರ ಕಚೇರಿಗೆ ಮಾಹಿತಿಯನ್ನು ಗೂಗಲ್ ಫಾರಂನಲ್ಲಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News