×
Ad

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರನ್ ವೇಯ ತಪ್ಪಾದ ತುದಿಯಲ್ಲಿ ಲ್ಯಾಂಡ್ ಆದ ಸ್ಪೈಸ್ ಜೆಟ್ ವಿಮಾನ

Update: 2021-10-25 13:29 IST

ಹೊಸದಿಲ್ಲಿ: ಸ್ಪೈಸ್‌ಜೆಟ್ ಹೈದರಾಬಾದ್-ಬೆಳಗಾವಿ ವಿಮಾನವು ರವಿವಾರ ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರನ್‌ವೇಯ ತಪ್ಪಾದ ತುದಿಯಲ್ಲಿ ಲ್ಯಾಂಡ್ ಆಗಿದ್ದು, ಪೈಲಟ್‌ಗಳನ್ನು ಕೆಳಗಿಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಸೋಮವಾರ ತಿಳಿಸಿದೆ.

ರವಿವಾರ ಈ ಘಟನೆ ನಡೆದಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

"ಅಕ್ಟೋಬರ್ 24 ರಂದು, ಸ್ಪೈಸ್ ಜೆಟ್ ಡಿಎಎಸ್ ಎಚ್8 ಕ್ಯೂ400 ವಿಮಾನವು ಹೈದರಾಬಾದ್ ನಿಂದ ಬೆಳಗಾವಿಗೆ ಹಾರಾಟ ನಡೆಸಿತು. ಎಟಿಸಿ ವಿಮಾನವನ್ನು ಬೆಳಗಾವಿಯಲ್ಲಿ ರನ್ ವೇ 26 ರಲ್ಲಿಇಳಿಯಲು ಅನುಮತಿ ನೀಡಿತು’’ ಎಂದು ಏರ್ ಲೈನ್ ವಕ್ತಾರರು ತಿಳಿಸಿದ್ದಾರೆ.

ವಿಮಾನವು ಅದೇ ರನ್‌ವೇಯ ಗೊತ್ತುಪಡಿಸಿದ ತುದಿಯ (ಆರ್ ಡಬ್ಲ್ಯು ವೈ 26) ಬದಲಿಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರನ್‌ವೇಯ ಇನ್ನೊಂದು ತುದಿಯಲ್ಲಿ (ಆರ್ ಡಬ್ಲ್ಯು ವೈ 08 ಎಂದು ಕರೆಯಲಾಗುತ್ತದೆ) ಸ್ಪರ್ಶಿಸಿತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News