ಸುವರ್ಣ ಚೆಳ್ಳೂರು, ಪ್ರವೀಣ್ ಕುಮಾರ್ ಸೇರಿ ನಾಲ್ವರಿಗೆ ‘ಅಕ್ಷರ ಸಂಗಾತ’ ಕಥಾ ಬಹುಮಾನ

Update: 2021-10-26 17:50 GMT

ಧಾರವಾಡ, ಅ.26: ‘ಅಕ್ಷರ ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆಯೋಜಿಸಿದ್ದ ಕಥಾ ಸ್ಪರ್ಧೆ ಬಹುಮಾನವನ್ನು ಪ್ರಕಟಿಸಿದೆ. ಹಿರಿಯ ಕಥೆಗಾರರಾದ ಬಾನು ಮುಷ್ತಾಕ್ ಹಾಗೂ ಜಿ.ವಿ. ಆನಂದಮೂರ್ತಿ ಕಥಾ ಸ್ವರ್ಧೆಯ ತೀರ್ಪುಗಾರರಾಗಿದ್ದು, ಸುವರ್ಣ ಚೆಳ್ಳೂರು ಅವರ ‘ಕಂಬದ ಹಕ್ಕಿ’ ಮತ್ತು ಪ್ರವೀಣ್ ಕುಮಾರ್ ಜಿ ಅವರ ‘ಗುಟ್ಟು’ ಕಥಾ ಬಹುಮಾನಕ್ಕೆ ಆಯ್ಕೆಯಾಗಿವೆ. ಇನ್ನು ನಾಗರಾಜ ಕೋರಿ ಅವರ ‘ಮಲ್ಲಯ್ಯನ ಮೈಕು’, ಝಬೈರ್ ಅಹ್ಮದ್ ಪರಪ್ಪು ಅವರ ‘ಒಂದು ತಿರುವಿನ ಕರಾಮತ್ತು’ ಒಪ್ಪಿತ ಕತೆಗಳಾಗಿ ಆಯ್ಕೆಯಾಗಿದ್ದು, ಆ ಕಥೆಗಳಿಗೂ ಬಹುಮಾನ ನೀಡಲಾಗುತ್ತದೆ ಎಂದು ಪತ್ರಿಕೆ ಸಂಪಾದಕ ಟಿ.ಎಸ್.ಗೊರವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಧಾರವಾಡದಲ್ಲಿ 2022ರ ಜನವರಿಯಲ್ಲಿ ‘ಅಕ್ಷರ ಸಂಗಾತ’ ಪತ್ರಿಕೆಯ ನಾಲ್ಕನೆಯ ವಾರ್ಷಿಕೋತ್ಸವ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಬಹುಮಾನ ವಿಜೇತ ನಾಲ್ಕು ಕಥೆಗಳಿಗೆ ತಲಾ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಹಾಗೆಯೇ ಕಥೆಗಳು ‘ಅಕ್ಷರ ಸಂಗಾತ’ ನವೆಂಬರ್ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News