ಮದರಸಾಗಳಿಗೆ ಬಿಜೆಪಿ 5 ಲಕ್ಷ ರೂ. ನೀಡುತ್ತಿದೆ: ಶಾಸಕ ಝಮೀರ್ ಅಹ್ಮದ್ ಆರೋಪ
Update: 2021-10-26 22:41 IST
ಬೆಂಗಳೂರು, ಅ.26: ಉಪಚುನಾವಣೆ ಹಿನ್ನೆಲೆ ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದರಸಾಗಳಿಗೆ ಬಿಜೆಪಿ ಪಕ್ಷವೂ ತಲಾ 5 ಲಕ್ಷ ರೂ. ನಗದು ಹಂಚಿಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಆರೋಪಿಸಿದ್ದಾರೆ.
ಮಂಗಳವಾರ ಇಲ್ಲಿನ ಹಾನಗಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂದಗಿಯ ಗ್ರಾಮದಲ್ಲಿರುವ ಮದರಸಾವೊಂದಕ್ಕೆ ಬಿಜೆಪಿ 5 ಲಕ್ಷ ರೂ. ನಗದು ನೀಡಿದ್ದು, ತಮಗೆ ಮತ ನೀಡುವಂತೆ ಬೇಡಿಕೊಂಡಿದೆ. ಇದನ್ನು ಸ್ಥಳೀಯ ಶಿವನಗೌಡ ಎಂಬಾತ ಮಾಹಿತಿ ನೀಡಿದ್ದಾನೆ ಎಂದರು.
ಜೆಡಿಎಸ್‍ನ ಇಬ್ಬರು ಮುಸ್ಲಿಮ್ ಅಭ್ಯರ್ಥಿಗಳು ಗೆಲ್ಲುವುದಿಲ್ಲ.ಆದರೆ, ಕಾಂಗ್ರೆಸ್ಸಿನ ಮತಗಳನ್ನು ವಿಭಜನೆ ಮಾಡುವ ಸಲುವಾಗಿಯೇ ಅವರನ್ನು ಕಣದಲ್ಲಿಡಲಾಗಿದೆ.ಅಲ್ಲದೆ, ಅವರಿಗಾಗಿ ಮಾಜಿ ಮುಖ್ಯಮುಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ದೂರಿದರು.