ಅವಳಿ ಮಕ್ಕಳ ತಂದೆಯಾಗಲಿದ್ದಾರೆ ಫುಟ್ಬಾಲ್ ಮಾಂತ್ರಿಕ ರೊನಾಲ್ಡೊ

Update: 2021-10-29 05:13 GMT
ಕ್ರಿಸ್ಟಿಯಾನೊ ರೊನಾಲ್ಡೊ (Instagram photo)

ಲಿಸ್ಬಾನ್, ಅ.29: ತನ್ನ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿರುವುದಾಗಿ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

"ನಾವು ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಘೋಷಿಸಲು ರೋಮಾಂಚನವಾಗುತ್ತಿದೆ. ನಮ್ಮ ಹೃದಯಗಳು ಪ್ರೀತಿಯಿಂದ ತುಂಬಿವೆ. ನಿಮ್ಮನ್ನು ಭೇಟಿ ಮಾಡಲು ಕಾಯಲು ಸಾಧ್ಯವಾಗುತ್ತಿಲ್ಲ" ಎಂದು 37 ವರ್ಷ ವಯಸ್ಸಿನ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಪೋರ್ಚ್‌ಗಲ್ ತಾರೆ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಈಗಾಗಲೇ ರೊನಾಲ್ಡೊ ನಾಲ್ಕು ಮಕ್ಕಳ ತಂದೆ.

ಈ ಫುಟ್ಬಾಲ್ ಮಾಂತ್ರಿಕನ ಹಿರಿಯ ಮಗ ಕ್ರಿಸ್ಟಿಯಾನೊ ಜ್ಯೂನಿಯರ್ 2020ರ ಜೂನ್‌ನಲ್ಲಿ ಬಾಡಿಗೆ ತಾಯಿಗೆ ಜನಿಸಿದ್ದ.

ಏಳು ವರ್ಷದ ಬಳಿಕ 2017ರ ಜೂನ್‌ನಲ್ಲಿ ರೊನಾಲ್ಡೊ ಇದೇ ವಿಧಾನದಲ್ಲಿ ಇವಾ ಮತ್ತು ಮಟೆಯೊ ಎಂಬ ಅವಳಿ ಮಕ್ಕಳ ತಂದೆಯಾಗಿದ್ದರು. ಅಲಾನಾ ಮಾರ್ಟಿನಾ 2017ರ ನವೆಂಬರ್‌ನಲ್ಲಿ ಜನಿಸಿದ್ದು, ರೋಡ್ರಿಗಸ್ ಜತೆಗಿನ ಸಂಬಂಧದಲ್ಲಿ ಜನಿಸಿದ ಮೊದಲ ಮಗು ಇದು. 2017ರಲ್ಲಿ ರೊನಾಲ್ಡೊ ತಾನು ಏಳು ಮಕ್ಕಳನ್ನು ಬಯಸಿರುವುದಾಗಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News