ಕೊಳ್ಳೇಗಾಲ: 300 ಕೆಜಿ ಹಸಿ ಮಾಗಳಿ ಬೇರು ಪತ್ತೆ, ಆರೋಪಿ ಪರಾರಿ

Update: 2021-10-30 13:46 GMT

ಕೊಳ್ಳೇಗಾಲ. ಅ.30.ಗುಡಿಸಲೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಭಾರಿ ಪ್ರಮಾಣದ ಹಸಿ ಮಾಗಳಿ ಬೇರನ್ನು‌ ಅರಣ್ಯ ಇಲಾಖೆ ವಶಕ್ಕೆ ಪಡೆದಿರುವ ಘಟನೆ ಜಾಗೇರಿ ಬಳಿ ನಡೆದಿದೆ.

ತಾಲೂಕಿನ ಜಾಗೇರಿ ಸಮೀಪದ ಆಲದಮರ ದೊಡ್ಡಿಯ ಮಣಿ ಎಂಬಾತ ಮಾಗಳಿ ಬೇರು ಮಾರಾಟ‌ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ ಎನ್ನಲಾಗಿದೆ‌ ಆರೋಪಿಯು ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾನೆ ತಿಳಿದು ಬಂದಿದೆ.

ಜಾಗೇರಿ ಸಮೀಪದ ಆಲದಮರದ ದೊಡ್ಡಿಯ ಗುಡಿಸಲೊಂದರಲ್ಲಿ ಅಕ್ರಮವಾಗಿ ಮಾಗಳಿ ಬೇರು ಸಂಗ್ರಹಿಸಿ ಇಡಲಾಗಿದೆ ಎಂಬ ಖಚಿತ ಮಾಹಿತಿ ತಿಳಿದ ಅರಣ್ಯ ಆರ್ ಎಫ್ಒ ಪ್ರವೀಣ್ ರಾಮಪ್ಪ ಛಲವಾದಿ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಮೇಲೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ 300 ಕೆಜಿ ಹಸಿ ಮಾಗಳಿ ಬೇರನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಬಂಧ ಕೊಳ್ಳೇಗಾಲ ಬಫರ್ ವಲಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಪಾರಾರಿಯಾದ ಆರೋಪಿಗಳ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ.

ದಾಳಿಯಲ್ಲಿ ಡಿವೈಆರ್ ಎಫ್ ಒ ಪ್ರಮೋದ್, ಅರಣ್ಯ ರಕ್ಷಕ ಸಿದ್ದಪ್ಪ ಸಿಬ್ಬಂದಿಗಳಾದ ಚಂದ್ರು, ಹೇಮಂತ್, ಗೋವಿಂದ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News