ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
Update: 2021-10-30 20:52 IST
ಬೆಂಗಳೂರು, ಅ.30: ಸರಕಾರವು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಹುದ್ದೆಯಲ್ಲಿದ್ದ ಇಶಾ ಪಂತ್ ಅವರನ್ನು ಕಲಬುರಗಿಯ ಪೊಲೀಸ್ ಎಸ್‍ಪಿ ಆಗಿ, ಕಲಬುರಗಿಯ ಪೊಲೀಸ್ ಎಸ್‍ಪಿ ಆಗಿದ್ದ ಸಿಮಿ ಮರಿಯಂ ಜಾರ್ಜ್ ಅವರನ್ನು ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯ ಡೆಪ್ಯೂಟಿ ಡೈರೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ.
ಮಂಡ್ಯ ಎಸ್‍ಪಿ ಆಗಿದ್ದ ಡಾ. ಸುಮನ್ ಡಿ.ಪೆನ್ನೇಕರ್ ಅವರನ್ನು ಉತ್ತರ ಕನ್ನಡ ಎಸ್‍ಪಿ ಆಗಿ, ಗದಗದ ಎಸ್‍ಪಿ ಆಗಿದ್ದ ಯತೀಶ್ ಎನ್. ಅವರನ್ನು ಮಂಡ್ಯ ಎಸ್‍ಪಿ ಆಗಿ, ಉತ್ತರ ಕನ್ನಡ ಎಸ್‍ಪಿ ಆಗಿದ್ದ ಶಿವಪ್ರಕಾಶ್ ದೇವರಾಜು ಗದಗದ ಎಸ್‍ಪಿ ಆಗಿ ವರ್ಗಾವಣೆ ಮಾಡಲಾಗಿದೆ.