×
Ad

ವೈಧ್ಯಕೀಯ ಕ್ಷೇತ್ರದಲ್ಲಿ ಸಾಧನೆ: ಸುಲ್ತಾನ್ ಬಿ ಯವರಿಗೆ ರಾಜ್ಯೋತ್ಸವ ಪ್ರಶಸ್ತಿ

Update: 2021-10-31 19:42 IST

ಜಗಳೂರು: ವೈಧ್ಯಕೀಯ ಕ್ಷೇತ್ರದಲ್ಲಿ  ಸಾಧನೆ ಮಾಡಿದ ಡಾ. ಸುಲ್ತಾನ್ ಬಿ ಜಗಳೂರು ಇವರಿಗೆ ಕರ್ನಾಟಕ ಸರಕಾರವು ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ತಾಲೂಕಿನ ಹನುಮಂತಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಜಗಳೂರು ಗೊಲ್ಲರಹಟ್ಟಿ ಗ್ರಾಮದ ವಾಸಿಯಾದ  ಸುಲ್ತಾನ್ ಬಿ. ಅವರು  ಸುಮಾರು 91  ವರ್ಷದ ಅವರು ಇದುವರೆಗೂ 30 ಕ್ಕೂ ಅಧಿಕ  ವರ್ಷಗಳಿಂದ  ಸೂಲಗಿತ್ತಿ (ಹೆರಿಗೆ) ಕೆಲಸ ಮಾಡಿಕೊಂಡು  800 ಕ್ಕೂ ಅಧಿಕ ಹೆರಿಗೆ ಮಾಡಿಸಿದ್ದಾರೆ. 

ನಾಟಿ ಔಷಧಿ

ನಾಟಿ ಔಷಧಿ ಮೂಲಕ  ಚರ್ಮ ರೋಗಗಳಿಗೆ  ಔಷಧಿ ಯನ್ನು ದಿನಕ್ಕೆ ಹತ್ತರಿಂದ ಇಪ್ಪತ್ತು ಜನಕ್ಕೆ ಚಿಕಿತ್ಸೆ ನೀಡಿರುತ್ತಾರೆ, ಇವರ ಔಷಧಿ ಆಂಧ್ರ, ತಮಿಳುನಾಡು, ಬೆಂಗಳೂರು ಮತ್ತು ಮಂಗಳೂರಿನವರೆಗೂ ಹಬ್ಬಿದೆ

ಹಾವು ಹಿಡಿಯುವ ಕಾಯಕ   

ಮುರಕಲು ಹೆಂಚಿನ ಮನೆಯಲ್ಲಿ ವಾಸಿಸುತ್ತಿರುವ ಸುಲ್ತಾನ್ ಬಿ ಅವರು, ಹಾವು ಹಿಡಿಯುವ ಕಾಯಕ ಮಾಡಿದ್ದಾರೆ. ಸಾವಿರಾರು ಹಾವುಗಳನ್ನು  ದೂರದ ಬಯಲು ಪ್ರದೇಶಗಳಿಗೆ ಬಿಟ್ಟು ಹಾವುಗಳ ಸಂತತಿಯನ್ನು ಉಳಿಸಿರುವ ಹೆಗ್ಗಳಿಕೆ ಇವರದು,  ಪ್ರಶಸ್ತಿ ಪುರಸ್ಕಾರಗಳು ,ರೋಟರಿ ಕ್ಲಬ್ ಲಯನ್ಸ್ ಕ್ಲಬ್, ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್ ಗಳು, ದಾವಣಗೆರೆ ಜಿಲ್ಲಾ ಕಸಾಪ,ಹಾಗೂ ತಾಲೂಕು ಕಸಾಪ ಮತ್ತು ಹಲವು ಸಮಾಜಗಳಿಂದ ಸನ್ಮಾನಿಸಿರುತ್ತವೆ. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News