ಪುನೀತ್ ರಾಜ್ ಕುಮಾರ್ ಮಾದರಿ ಕಣ್ಣು ದಾನ ಮಾಡಲು ನೇಣಿಗೆ ಶರಣಾದ ಅಭಿಮಾನಿ
Update: 2021-11-01 13:22 IST
ಆನೇಕಲ್ : ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯೊಬ್ಬ ತನ್ನ ಕಣ್ಣುಗಳನ್ನು ಪುನೀತ್ ಅವರಂತೆ ದಾನ ಮಾಡಿ ಅಂತ ತಿಳಿಸಿ ನೇಣಿಗೆ ಶರಣಾದ ಘಟನೆ ಬನ್ನೇರುಘಟ್ಟ ಸಮೀಪದ ಶ್ಯಾನುಬೋಗನಹಳ್ಳಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ರಾಜೇಂದ್ರ (40) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.
ನಟ ಪುನೀತ್ ನಿಧನದಿಂದ ಬೇಸರಗೊಂಡಿದ್ದ ರಾಜೇಂದ್ರ ಹಾಗು ಪುನೀತ್ ಕಣ್ಣು ದಾನ ಮಾಡಿದ್ದನ್ನು ಆದರ್ಶವಾಗಿದೆ ಎಂದು ಮನೆಯಲ್ಲೆಲ್ಲಾ ತಿಳಿಸುತ್ತಲೇ ಇದ್ದ. ಹಾಗೆಯೇ ಒಂದು ವರ್ಷಕ್ಕೂ ಮುನ್ನ ಮದುವೆಯಾಗಿದ್ದ ರಾಜೇಂದ್ರ ತಮ್ಮ ನೆಚ್ಚಿನ ನಾಯಕನ ಮಾದರಿಯನ್ನು ಜೀವಂತವಾಗಿಡಲು ಜೀವ ಬಿಟ್ಟಿದ್ದಾನೆ ಎಂದು ಸಹೋದರ ಲೋಹಿತ್ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬನ್ನೇರುಘಟ್ಟ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.