ಉಪ ಚುನಾವಣೆ: ಹಾನಗಲ್ ನಲ್ಲಿ ಜೆಡಿಎಸ್ ಗಿಂತ ಪಕ್ಷೇತರ ಅಭ್ಯರ್ಥಿ ಮುಂದು !
Update: 2021-11-02 12:01 IST
ಹಾನಗಲ್, ನ.2: ಹಾನಗಲ್ ಉಪಚುನಾವಣೆಯಲ್ಲಿ 9ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ನಿರಂತರ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ನಡುವೆ ಜೆಡಿಎಸ್ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಪಕ್ಷೇತರ ಅಭ್ಯರ್ಥಿ 3ನೇ ಸ್ಥಾನ ಗಳಿಸಿರುವುದು ವಿಶೇಷ.
9ನೇ ಸುತ್ತಿನಲ್ಲಿ ಶ್ರೀನಿವಾಸ ಮಾನೆ (40,785 ಮತ) 4,719 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ -36,066 ಮತಗಳನ್ನು ಗಳಿಸಿದ್ದಾರೆ.
ಆದರೆ ಜೆಡಿಎಸ್ ಅಭ್ಯರ್ಥಿ ನಿಯಾಝ್ ಶೇಖ್ (432) ಮತಗಳನ್ನು ಗಳಿಸಿದ್ದರೆ ಪಕ್ಷೇತರ ಅಭ್ಯರ್ಥಿ ನಝೀರ್ ಅಹ್ಮದ್ ಸವಣೂರ (559) 127 ಹೆಚ್ಚುವರಿ ಮತಗಳನ್ನು ಗಳಿಸಿ, 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಕಂಡುಬರುತ್ತಿದೆ.