ಕಲಬುರಗಿ: ನೀರು ತುಂಬಿದ್ದ ಗುಂಡಿಯಲ್ಲಿ ಮುಳುಗಿ ಮೂವರು ಬಾಲಕರು ಮೃತ್ಯು
Update: 2021-11-03 17:16 IST
ಕಲಬುರಗಿ: ಖಾಲಿ ನಿವೇಶನದಲ್ಲಿ ಗುಂಡಿಯಲ್ಲಿ ಮುಳುಗಿ ಮೂವರು ಬಾಲಕರು ಸಾವನಪ್ಪಿರುವ ಘಟನೆ ಇಲ್ಲಿನ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದರ್ಶನ್ (12), ಪ್ರಶಾಂತ (10), ವಿಘ್ನೇಶ್ (9) ಮೃತಪಟ್ಟ ಬಾಲಕರು ಎಂದು ಗುರುತಿಸಲಾಗಿದ್ದು, ಲಾಲಗಿರಿ ಕ್ರಾಸ್ ಹತ್ತಿರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ಮನೆ ಕಟ್ಟುವುದಕ್ಕೆ ಖಾಲಿ ನಿವೇಶನದಲ್ಲಿ ಗುಂಡಿ ತೋಡಲಾಗಿತ್ತು. ಕಳೆದ ರಾತ್ರಿ ಸುರಿದ ಧಾರಕಾರ ಮಳೆಯಿಂದ ತಗ್ಗು ಗುಂಡಿ ಜಲಾವೃತವಾಗಿತ್ತು.
ಗುಂಡಿಯಲ್ಲಿದ್ದ ನೀರಿನಲ್ಲಿ ಬಾಲಕರು ಆಟ ಆಡಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕೆರೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ನ್ಯೂ ರಾಘವೇಂದ್ರ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.