ವಿರಾಜಪೇಟೆ: ಕೇರಳ ಮೂಲದ ವ್ಯಕ್ತಿ ಆತ್ಮಹತ್ಯೆ
Update: 2021-11-03 17:38 IST
ಮಡಿಕೇರಿ ನ.3 : ಕೇರಳ ಮೂಲದ ವ್ಯಕ್ತಿಯೊಬ್ಬರು ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.
ಕೇರಳ ರಾಜ್ಯದ ಕೊಯಿಕೊಡ್ ಕಕ್ಕೊಡಿ ಗ್ರಾಮದ ಕಿಳಕ್ ಮುರಿ ನಿವಾಸಿ ದಿವ್ಯ ನಂದನ್ (ದಿವ್ಯನ್ 54) ಮೃತ ವ್ಯಕ್ತಿ.
ವಿರಾಜಪೇಟೆ ಸುತ್ತಮುತ್ತ ವರ್ಕ್‍ಶಾಪ್‍ಗಳಲ್ಲಿ ವಾಹನಗಳಿಗೆ ಬಣ್ಣ ಬಳಿಯುವ ವೃತ್ತಿ ನಿರ್ವಹಿಸುತ್ತಿದ್ದ ದಿವ್ಯ ನಂದನ್ ಅ.31 ರ ಸಂಜೆ ನಂತರ ನಾಪತ್ತೆಯಾಗಿದ್ದರು. ಇವರು ವಾಸವಿದ್ದ ಬಾಡಿಗೆ ಮನೆಯ ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಸಂಶಯಗೊಂಡ ಸ್ನೇಹಿತರು ನ.2 ರಂದು ಮನೆಯೊಳಗೆ ಪರಿಶೀಲಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದೆ.
ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಿದರು. ಮೃತ ದಿವ್ಯ ನಂದನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.