ನ.4ರಂದು ಕೊಪ್ಪಳದಲ್ಲಿ ಇಹ್ಸಾನ್ ಸೆಂಟರ್ ಲೋಕಾರ್ಪಣೆ

Update: 2021-11-03 16:06 GMT

ಬೆಂಗಳೂರು, ನ.3: ಇಹ್ಸಾನ್ ಕರ್ನಾಟಕ ಇದರ ನೂತನ ಸೆಂಟರ್ ನ.4ರಂದು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೆಸಿಎಫ್ ಸೌದಿ ಅರೇಬಿಯಾದ ಅಲ್ ಗಸೀಂ ಘಟಕದ ಪ್ರಾಯೋಜಕತ್ವದಲ್ಲಿ ನೂತನ ಸೆಂಟರ್ ನಿರ್ಮಾಣಗೊಂಡಿದೆ ಎಂದು ಇಹ್ಸಾನ್ ಕರ್ನಾಟಕ ಅಧ್ಯಕ್ಷ ಶಾಫಿ ಸಅದಿ ತಿಳಿಸಿದ್ದಾರೆ. 

ಉತ್ತರ ಕರ್ನಾಟಕದ ಜನರ ಶೈಕ್ಷಣಿಕ ಹಿಂದುಳಿವಿಕೆಯನ್ನು ಪರಿಹರಿಸಿ ಅಲ್ಲಿರುವ ವಿದ್ಯಾರ್ಥಿಗಳನ್ನು ಸಂಪನ್ಮೂಲ ಬೋಧಕರನ್ನಾಗಿ ಮಾಡುವ ಯೋಜನೆಯೊಂದಿಗೆ ಇಹ್ಸಾನ್ ಹರಿಹರ ಸೆಂಟರ್ ನಲ್ಲಿ ಉಚಿತ ಆಹಾರ ಮತ್ತು ಶಾಲಾ ಕಾಲೇಜು ಶಿಕ್ಷಣದೊಂದಿಗೆ ಕಾಲೇಜು ನಡೆಯುತ್ತಿದೆ, ಸುಮಾರು 50 ರಷ್ಟು ವಿದ್ಯಾರ್ಥಿಗಳು ಅಲ್ಲಿ ವಾಸ್ತವ್ಯದ ವ್ಯವಸ್ಥೆಯೊಂದಿಗೆ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಶಾಫಿ ಸಅದಿ ತಿಳಿಸಿದ್ದಾರೆ. 

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನೂತನವಾಗಿ ಇಹ್ಸಾನ್ ಸೆಂಟರ್ ಉದ್ಘಾಟನೆಗೊಳ್ಳಲಿದ್ದು, ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕನಕಗಿರಿ ಶಾಸಕ ಬಸವರಾಜ ಧಡೇಸುಗೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇಹ್ಸಾನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಹಫೀಳ್ ಸಅದಿ ಕೊಡಗು, ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಶೇಖ್ ಬಾವ ಹಾಜಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಹಾಗೂ ಕೆಸಿಎಫ್ ರಾಷ್ಟ್ರೀಯ ಸಮಿತಿ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News