×
Ad

ರೈಲ್ವೇ ಸಂರಕ್ಷಣಾ ಪಡೆ ಕಾರ್ಯಾಚರಣೆ: 79 ಮಕ್ಕಳ ರಕ್ಷಣೆ

Update: 2021-11-04 23:04 IST

ಬೆಂಗಳೂರು, ನ.4: ರೈಲ್ವೇ ಸಂರಕ್ಷಣಾ ಪಡೆ ಅಕ್ಟೋಬರ್ ತಿಂಗಳಿನಲ್ಲಿ ಕಾರ್ಯಾಚರಣೆ ನಡೆಸಿದ್ದು, 17 ಬಾಲಕಿಯರು ಸೇರಿದಂತೆ 79 ಮಕ್ಕಳನ್ನು ರಕ್ಷಣೆ ಮಾಡಿ ಪೋಷಕರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅದೇ ರೀತಿ, ಕಳವು ಪ್ರಕರಣಗಳ ಸಂಬಂಧ 13,31,450 ರೂ. ಮೌಲ್ಯದ ಲ್ಯಾಪ್‍ಟಾಪ್‍ಗಳು, ಮೊಬೈಲ್‍ಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಇತರ ವೈಯಕ್ತಿಕ ವಸ್ತುಗಳನ್ನು ರೈಲುಗಳು ಮತ್ತು ನಿಲ್ದಾಣಗಳಿಂದ ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಪ್ರಯಾಣಿಕರಿಗೆ ಹಸ್ತಾಂತರಿಸಲಾಗಿದೆ.

ಇನ್ನು, 91,670 ಮೌಲ್ಯದ ಮದ್ಯದ ಬಾಟಲಿಗಳು ಮತ್ತು ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡು ಅವುಗಳನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News