ಕೇದಾರನಾಥದಲ್ಲಿ ʼಶೂʼ ಧರಿಸಿದ ಪ್ರಧಾನಿ ಮೋದಿ: ಸಾಮಾಜಿಕ ತಾಣದಾದ್ಯಂತ ಪರ-ವಿರೋಧ ಚರ್ಚೆ

Update: 2021-11-06 07:09 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಕೇದಾರನಾಥಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ಕುರಿತು ಫೋಟೊಗಳನ್ನು ಪ್ರಧಾನಿಯ ಅಧಿಕೃತ ಸಾಮಾಜಿಕ ತಾಣ ಖಾತೆಗಳಲ್ಲಿ ಪ್ರಕಟಿಸಲಾಗಿತ್ತು. ಇದೀಗ ಕೇದಾರನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿರುವ ಸಂದರ್ಭ ಶೂ ಧರಿಸಿದ್ದೇಕೆ? ಎಂಬ ಪ್ರಶ್ನೆಗಳು ಸಾಮಾಜಿಕ ತಾಣ ಬಳಕೆದಾರರಿಂದ ಬಂದಿದೆ.

ಈ ಕುರಿತು ಟ್ವಿಟರ್‌ ನಲ್ಲಿ ವೀಡಿಯೊವನ್ನು ಟ್ವೀಟ್‌ ಮಾಡಿದ ಯುವಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಬಿ.ವಿ, "ಪ್ರಧಾನಿ ಮೋದಿಯವರು ಪರಿಕ್ರಮದ ವೇಳೆ ರೆಡ್‌ ಕಾರ್ಪೆಟ್‌ ಮೇಲೆ ಶೂ ಧರಿಸಿ ನಡೆಯುತ್ತಿದ್ದಾರೆಂದರೆ ಅದೂ ಕೂಡಾ ಸಂಪ್ರದಾಯವಾಗಿರಬೇಕು ಅಲ್ಲವೇ?" ಎಂದು ವ್ಯಂಗ್ಯವಾಡಿದ್ದಾರೆ.

ಇನೋರ್ವ ಬಳಕೆದಾರರು ಪ್ರಧಾನಿಯ ಪರವಹಿಸಿ, "ಅದು ಶೂ ರೀತಿ ಕಾಣುವ ಸಾಕ್ಸ್‌ ಆಗಿದೆ. ಕೆಲಗಿರುವ ಕಲ್ಲುಗಳ ತಂಪಿನಿಂದ ರಕ್ಷಿಸಿಕೊಳ್ಳಲು ಈರೀತಿ ಮಾಡಲಾಗುತ್ತದೆ" ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೋರ್ವರು " ಇದೇ ರೀತಿ ಒಂದು ವೇಳೆ ರಾಹುಲ್‌ ಗಾಂಧಿ ತೆರಳಿದ್ದರೆ ಅದು ದೇಶದಾದ್ಯಂತ ವಿವಾದಕ್ಕೀಡಾಗುತ್ತಿತ್ತು." ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News