ಎಸ್‍ಡಿಪಿಐ ನೂತನ ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಆಯ್ಕೆ
ಬೆಂಗಳೂರು, ನ. 7: ಮುಂದಿನ ಮೂರು ವರ್ಷಗಳ ಅವಧಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಮೈಸೂರು ಆಯ್ಕೆಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ನಡೆದ ಪಕ್ಷದ ಪ್ರತಿನಿಧಿಗಳ ಸಭೆಯಲ್ಲಿ ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ, ರಾಷ್ಟ್ರೀಯ ಉಪಾಧ್ಯಕ್ಷ ದೆಹಲಾನ್ ಬಾಘವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಇಲ್ಯಾಸ್ ಮುಹಮ್ಮದ್ ತುಂಬೆ ಹಾಗೂ ಮುಹಮ್ಮದ್ ಶಫಿ ಅವರ ನೇತೃತ್ವದಲ್ಲಿ ಮುಂದಿನ 2021-24ರ ಅವಧಿಗೆ ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಮಝೀದ್ ಮೈಸೂರು ಕಾರ್ಯನಿರ್ವಹಿಸಲಿದ್ದಾರೆ.
ಅದೇ ರೀತಿ, ಆಂತರಿಕ ಚುನಾವಣೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ನೂತನ 27 ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ದೇವನೂರು ಪುಟ್ನಂಜಯ್ಯ ಹಾಗೂ ಪ್ರೊ.ಸಯಿದಾ ಸಾದಿಯಾ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಅಬ್ದುಲ್ ಲತೀಫ್ ಪುತ್ತೂರು, ಭಾಸ್ಕರ್ ಪ್ರಸಾದ್ ಹಾಗೂ ಆಫ್ಸರ್ ಕೊಡ್ಲಿಪೇಟೆ.
ಕಾರ್ಯದರ್ಶಿಗಳಾಗಿ ಅಶ್ರಫ್ ಮಾಚಾರ್, ಅನಂದ್ ಮಿತ್ತಬೈಲ್, ಶಾಫಿ ಬೆಳ್ಳಾರೆ, ಕೋಶಾಧಿಕಾರಿ ಆಗಿ ಖಾಲಿದ್ ಯಾದ್ಗೀರ್, ರಾಜ್ಯ ಸಮಿತಿ ಸದಸ್ಯರಾಗಿ ಅಬ್ದುಲ್ ಹನ್ನಾನ್, ಪ್ರೊ. ನಾಝ್ನಿನ್ ಬೇಗಂ, ಅಲ್ಫಾನ್ಸೋ ಫ್ರಾಂಕೋ, ನ್ಯಾಯವಾದಿ ಮಜೀದ್ ಖಾನ್, ಮುಜಾಹಿದ್ ಪಾಷಾ.ಅಮ್ಜದ್ ಖಾನ್, ಅಬ್ದುಲ್ ರಹೀಂ ಪಟೇಲ್, ಅತಾವುಲ್ಲಾ ಜೋಕಟ್ಟೆ, ಇಬ್ರಾಹಿಂ ಮಜೀದ್ ತುಂಬೆ, ಝೀನತ್ ಬಂಟ್ವಾಳ, ಪ್ರೊ.ಘಯಾಸುದ್ದೀನ್, ಮೆಹಬೂಬ್ ಮುಲ್ಲಾ, ಮೌಲಾನ ನೂರುದ್ದಿನ್, ರಿಯಾಝ್ ಕಡಂಬು, ಸಲೀಂ ಖಾನ್ ಶಿವಮೊಗ್ಗ ಹಾಗೂ ರಫೀ ಪಾಷಾ ಆಯ್ಕೆಯಾಗಿದ್ದಾರೆ.
ಶೋಷಿತ ವರ್ಗಗಳ ಧ್ವನಿಯಾಗುವೆ: `ಎಸ್‍ಡಿಪಿಐ ಪಕ್ಷದ ರಾಜ್ಯ ಅಧ್ಯಕ್ಷಕ್ಕೆ ಪುನಃ ನನ್ನನ್ನು ಆಯ್ಕೆ ಮಾಡಲಾಗಿದೆ. ನನ್ನ ಪಾಲಿಗೆ ಇದು ಸ್ಥಾನ ಮಾತ್ರವಲ್ಲ, ಜವಾಬ್ದಾರಿಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯ ವ್ಯಾಪಿ ಶೋಷಿತ ಜನವರ್ಗಗಳ ಧ್ವನಿಯಾಗಿ ಕೆಲಸ ಮಾಡುವೆ'
-ಅಬ್ದುಲ್ ಮಝೀದ್, ಎಸ್‍ಡಿಪಿಐ ರಾಜ್ಯಾಧ್ಯಕ್ಷ