×
Ad

ಮಾಕ್ರ್ಸಿಸ್ಟ್ ಸಿದ್ಧಾಂತದಿಂದ ಹಲವು ರಂಗಗಳಲ್ಲಿ ಹೊಸ ಆಯಾಮ: ಪ್ರಕಾಶ್ ಬೆಳವಾಡಿ

Update: 2021-11-07 21:52 IST

ಬೆಂಗಳೂರು, ನ.7: ಮಾಕ್ರ್ಸಿಸ್ಟ್ ಸಿದ್ಧಾಂತದಿಂದಾಗಿ ರಂಗಭೂಮಿ ಸೇರಿದಂತೆ ಹಲವು ರಂಗಗಳು ಹೊಸ ಆಯಾಮವನ್ನು ಪಡೆದುಕೊಂಡವು ಎಂದು ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿ ಹೇಳಿದ್ದಾರೆ. 

ರವಿವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ರಂಗಚಾವಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಪ್ಪತ್ತರ ದಶಕದಲ್ಲಿ ಮಾಕ್ರ್ಸಿಸ್ಟ್ ಸಿದ್ಧಾಂತ ಹೆಚ್ಚು ಪ್ರಭಾವವನ್ನು ಬೀರಿತ್ತು. ಹೀಗಾಗಿ, ಜನರಲ್ಲಿ ರಾಜಕೀಯ, ರಂಗಭೂಮಿ, ಸಿನೆಮಾ, ಶಿಕ್ಷಣದ ಪ್ರಜ್ಞೆ ಬೆಳೆಯಲು ಕಾರಣವಾಯಿತು ಎಂದು ಹೇಳಿದರು.

ಕನ್ನಡ ರಂಗಭೂಮಿಯಲ್ಲಿ ಆಗ ಜಾತಿವಾದ ಹೆಚ್ಚಾಗಿತ್ತು. ಅದು ನನ್ನ ಕನ್ನಡ ರಂಗಭೂಮಿ ಆಸಕ್ತಿಯನ್ನು ತಗ್ಗಿಸಿತ್ತು. ಆದರೆ, ನನಗೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಇರುವುದರಿಂದ ಆಂಗ್ಲ ರಂಗಭೂಮಿ ನನ್ನ ಕೈ ಹಿಡಿಯಿತು ಎಂದ ಅವರು, ಈಗ ಕನ್ನಡ, ಇಂಗ್ಲೀಷ್ ಎರಡು ರಂಗಭೂಮಿಯಲ್ಲೂ ಅವಕಾಶಗಳು ಸಿಗುತ್ತಿವೆ ಎಂದು ಹೇಳಿದರು. 

ಪಾಶ್ಚಿಮಾತ್ಯ ರಂಗಭೂಮಿಯಲ್ಲಿ ಕೆಲಸ ಮಾಡಿದ್ದರಿಂದ ನನಗೆ  ಇತರೆ ರಾಜ್ಯದವರ ಪರಿಚಯ ಬೆಳೆಯಿತು. ಹೀಗಾಗಿ, ಹಲವು ನಾಟಕಗಳನ್ನು ನಿರ್ದೇಶನ ಮಾಡಲು ನನಗೆ ಸಾಧ್ಯವಾಯಿತು ಎಂದರು.

ಕಾರ್ಯಕ್ರಮದಲ್ಲಿ ನಾಟಕ ಅಕಾಡಮಿಯ  ಡಾ. ಭೀಮ್ ಸೇನ್, ನಾಟಕ ಅಕಾಡಮಿಯ ರಿಜಿಸ್ಟ್ರಾರ್ ಬಿ. ಮಂಜುನಾಥ್ ಆರಾಧ್ಯ, ಅಭಿರುಚಿ ಚಂದ್ರು, ರಂಗಭೂಮಿ ಕಲಾವಿದ ರಾಜಾರಾಮ್, ಸೇತುರಾಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News