×
Ad

ಬಾಬಾ ಬುಡನ್ ಗಿರಿ ವಿವಾದ: ಇತ್ಯರ್ಥಕ್ಕಾಗಿ ರಾಜ್ಯದ ಕಾನೂನು ಮಂತ್ರಿಯನ್ನು ಭೇಟಿಯಾದ ಕರ್ನಾಟಕ ಮುಸ್ಲಿಂ ಜಮಾಅತ್ ನಿಯೋಗ

Update: 2021-11-08 21:19 IST

ಬೆಂಗಳೂರು: ರಾಜ್ಯದ ಸೌಹಾರ್ದತೆಯ ತಾಣವಾಗಿರುವ ಬಾಬಾ ಬುಡನ್ ಗಿರಿಯಲ್ಲಿ ಅರ್ಚಕರ ನೇಮಕ ಮಾಡಲು ಸರಕಾರಕ್ಕೆ ಆದೇಶಿಸಿದ ‌ನ್ಯಾಯಾಂಗದ ತೀರ್ಪು ಪುನರ್ ಪರಿಶೀಲನೆ ಮಾಡ ಬೇಕೆಂದು ಸರಕಾರವನ್ನು ಒತ್ತಾಯಿಸಿ ರಾಜ್ಯದ ಕಾನೂನು ಹಾಗೂ ಸಂಸದೀಯ ಸಚಿವ ಮಾಧು ಸ್ವಾಮಿಯವರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ನೇತೃತ್ವದಲ್ಲಿ ನಿಯೋಗ ಭೇಟಿಯಾಗಿ ಸಮಗ್ರವಾಗಿ ಚರ್ಚೆ ನಡೆಸಿತು.

ಯಾವುದೇ ರೀತಿಯಲ್ಲಿ ಮುಸ್ಲಿಂ ಸಮುದಾಯದ ಆಚರಣೆಗಳಿಗೆ ತೊಡಕಾಗದಂತೆ ಹಾಗೂ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಸಚಿವರನ್ನು ನಿಯೋಗ ಆಗ್ರಹಿಸಿತು. 

ವಿಷಯಗಳನ್ನು ಆಲಿಸಿದ ಸಚಿವರು,ಕಾನೂನು ರೀತಿಯಲ್ಲಿ ಶಾಶ್ವತ ಪರಿಹಾರವನ್ನು ಕಾಣುವ  ಭರವಸೆಯನ್ನು ನಿಯೋಗಕ್ಕೆ ನೀಡಿದರು. 

ನಿಯೋಗದಲ್ಲಿ ರಾಜ್ಯ ವಕ್ಫ್ ಸದಸ್ಯ ಮೌಲಾನಾ ಶಾಫಿ ಸಅದಿ, ಬಾಬಾ ಬುಡನ್ ಗಿರಿ ದರ್ಗಾದ ಶಾ ಖಾದ್ರಿ ಸಯ್ಯದ್ ಗೌಸ್ ಮುಹಿಯದ್ದೀನ್ ದರ್ಗಾ ಖಲೀಫ ವಸೀಂ ಅಹಮದ್,ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ಉಪಾಧ್ಯಕ್ಷ ಮೌಲಾನಾ ಶಬೀರ್ ಅಹಮದ್ ,ಬೆಂಗಳೂರು ಜಿಲ್ಲಾ ಸಮಿತಿಯ ನಾಯಕರಾದ ಮೌಲಾನಾ ಹುಸೈನ್ ಮಿಸ್ಬಾಹಿ, ಮೌಲಾನಾ ಅಕ್ಬರ್ ಆಲಿ ರಝ್ವಿ,ಚಿಕಮಗಳೂರು ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಶಾಹಿದ್ ರಝ್ವಿ ಮೊದಲಾದವರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News