×
Ad

ಹನೂರು: ರಸ್ತೆ ಅಪಘಾತ; ಯುವಕ ಮೃತ್ಯು

Update: 2021-11-09 17:36 IST

ಹನೂರು: ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗಮದ್ಯೆದ ತಾಳಬೆಟ್ಟದ 11ನೇ ಕ್ರಾಸ್ ನಲ್ಲಿ ನಡೆದ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ.

ಬೆಳಕವಾಡಿಯ ಸರಗೂರು ಗ್ರಾಮದ ಮತ್ತುರಾಜು ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.

ಹನೂರು ತಾಲ್ಲೂಕಿನ ಮಹದೇಶ್ವರಬೆಟ್ಟಕ್ಕೆ ದ್ವಿಚಕ್ರದಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭಂವಿಸಿದ್ದು, ಈ ಸಂಬಂಧ ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಮಲೆಮಹದೇಶ್ವರಬೆಟ್ಟ ಪೋಲಿಸರು ಕ್ರಮ ಕೈಗೂಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News