ಹನೂರು: ಭೂ ಕುಸಿತದಿಂದಾಗಿ ರಸ್ತೆ ಸಂಚಾರ ಸ್ಥಗಿತ
Update: 2021-11-09 22:21 IST
ಹನೂರು: ಕರ್ನಾಟಕ ತಮಿಳುನಾಡು ಗಡಿಯಲ್ಲಿ ಬಿದ್ದ ಮಳೆಯ ಪರಿಣಾಮದಿಂದಾಗಿ ಗುಡ್ಡದ ಬಂಡೆ ಮತ್ತು ಭೂ ಕುಸಿತದಿಂದಾಗಿ ಉಭಯ ರಾಜ್ಯಗಳ ನಡುವೆ ರಸ್ತೆ ಸಂಚಾರ ಸ್ಥಗಿತಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ನಾಲ್ ರೋಡ್ ಸಮೀಪದ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ನಾಲ್ ರೋಡ್ ಸಮೀಪದ ಗುಡ್ಡದಲ್ಲಿನ ಬಂಡೆ ಹಾಗೂ ಭೂ ಕುಸಿತದಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ರಸ್ತೆ ಸಂಚಾರ ಬಂದ್ ಆಗಿದ್ದ ಪರಿಣಾಮ ಪ್ರಯಾಣಿಕರು ನಡೆದುಕೊಂಡು ಬರುವ ಸ್ಥಿತಿ ಬಂದಿತ್ತು.
ಕಳೆದ ಕೆಲವು ದಿನಗಳಿಂದ ಕರ್ನಾಟಕ ತಮಿಳುನಾಡು ಗಡಿಯಲ್ಲಿ ಬಿಡುವಿಲ್ಲದೆ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನಾಲ್ ರೋಡ್ ಸಮೀಪದ ಗುಡ್ಡ ಕುಸಿದ ಪರಿಣಾಮ ರಸ್ತೆ ಬಂದ್ ಆಗಿದೆ. ತಮಿಳುನಾಡಿನ ಬರಗೂರು, ಅಂದಿಯೂರು ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ.