ಚಿಕ್ಕಮಗಳೂರು: ವಿವಿಧ ಠಾಣಾ ವ್ಯಾಪ್ತಿಯ 77 ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು

Update: 2021-11-09 17:00 GMT

ಚಿಕ್ಕಮಗಳೂರು: ಜಿಲ್ಲೆಯ 20 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 1ವರ್ಷದಲ್ಲಿ ನಡೆದ 77 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 82.5ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ವಾರಸುದಾರರಿಗೆ ಮರಳಿ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಎಚ್ ಅಕ್ಷಯ್ ತಿಳಿಸಿದರು.

ಮಂಗಳವಾರ ನಗರದ ರಾಮನಹಳ್ಳಿಯ ಡಿಎಆರ್ ಮೈದಾನದಲ್ಲಿ ಪ್ರಾಪರ್ಟಿ ರಿಟರ್ನ್ ಪೆರೇಟ್ ಕಾರ್ಯಕ್ರಮದಲ್ಲಿ ವಾರಸುದಾರರಿಗೆ ವಿವಿಧ ವಸ್ತುಗಳನ್ನು ಹಸ್ತಾಂತರಿಸಿ ನಂತರ ಮಾತನಾಡಿದ ಅವರು, 41.27ಲಕ್ಷ ಮೌಲ್ಯದ 900 ಗ್ರಾಂ. ಚಿನ್ನ ಹಾಗೂ 12ಕೆಜಿ ಬೆಳ್ಳಿಯ ಆಭರಣಗಳು, 21.54ಲಕ್ಷ ಮೌಲ್ಯದ 45 ದ್ವಿಚಕ್ರ, ನಾಲ್ಕು ಚಕ್ರ ಹಾಗೂ ತ್ರಿಚಕ್ರ ವಾಹನನಗಳು, 7.17ಲಕ್ಷ ನಗದು, 3.30ಲಕ್ಷ ಮೌಲ್ಯದ ಅಡಿಕೆ, 1.41ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ 7.82 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿದಂತೆ 82,53,511 ಲಕ್ಷ ಮೌಲ್ಯದ ವಸ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದರು.

ಕಳ್ಳತನಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಹಾಗೂ ಕಳ್ಳತವನ್ನು ತಡೆಗಟ್ಟಲು ಎಲ್ಲಾ ರೆಸಿಡೆನ್ಷಿಯಲ್ ಏರಿಯಾಗಳಲ್ಲಿ ವಾರ್ಡ್ ಮೀಟಿಂಗ್ ಮಾಡಿ ನಾಗರಿಕರಿಕರು ಮನೆಗಳಿಗೆ ಕ್ಯಾಮೆರಾ ಅಳವಡಿಸಿಕೊಳ್ಳಲು ಮನವಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಎಲ್ಲಾ ದೇವ ಸ್ಥಾನಗಳಲ್ಲಿ ದೇವಾಲಯದ ಆಡಳಿತ ಮಂಡಳಿ ಜೊತೆ ಚರ್ಚಸಿ ಕ್ಯಾಮೆರಾ ಹಾಗೂ ಅಲ ರಾಂ ಅಳವಡಿಸಲಾಗುತ್ತಿದ್ದು ಈಗಾಗಲೇ ಸಖರಾಯಪಟ್ಟಣ ಹಾಗೂ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವಾಲಯಗಳಲ್ಲಿ ಇದನ್ನು ಬಹುತೇಕ ಜಾರಿಗೆ ತರಲಾಗಿದೆ ಎಂದ ಅವರು, ಇಲಾಖೆಯಲ್ಲಿ ರಾತ್ರಿ ಪಾಳಿಯವನ್ನು ಸಕ್ರಿಯಗೊಳಿಸಲಾಗಿದ್ದು, ರೆಸಿಡೆನಿಸ್ಸಿಯಲ್ ಏರಿಯಾದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News