ಹೋಟೆಲ್ ಗಲಾಟೆ ಪ್ರಕರಣ: ಹ್ಯಾಕರ್ ಶ್ರೀಕೃಷ್ಣಗೆ ಜಾಮೀನು
Update: 2021-11-10 17:29 IST
ಬೆಂಗಳೂರು, ನ.10: ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ಸೆರೆಸಿಕ್ಕಿದ್ದ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣಗೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನ.8ರಂದು ಶ್ರೀಕೃಷ್ಣ ಮತ್ತು ಆತನ ಸ್ನೇಹಿತ ವಿಷ್ಣುಭಟ್ ದೊಮ್ಮಲೂರು ಹಳೇ ಏರ್‌ಪೋರ್ಟ್ ರಸ್ತೆಯ ಪ್ರತಿಷ್ಠಿತ ಖಾಸಗಿ ಹೋಟೆಲ್‌ನಲ್ಲಿ ಸಿಬ್ಬಂದಿ ಮೇಲಿನ ಹಲ್ಲೆ ನಡೆಸಿದ ಪ್ರಕರಣದಲ್ಲಿ ಜೀವನ ಭಿಮಾನಗರ ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ ಶ್ರೀಕೃಷ್ಣ ಮತ್ತು ವಿಷ್ಣುಭಟ್ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢವಾಗಿತ್ತು. ವಿಷ್ಣುವನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.