×
Ad

ಕೋಲಾರ: ಕೆರೆಯಲ್ಲಿ ಇಬ್ಬರು ಅಪರಿಚಿತ ಮಹಿಳೆಯರ ಮೃತದೇಹಗಳು ಪತ್ತೆ

Update: 2021-11-12 14:53 IST

ಕೋಲಾರ, ನ.12: ಇಬ್ಬರು ಅಪರಿಚಿತ ಮಹಿಳೆಯರ ಮೃತದೇಹಗಳು ಕೆರೆಯಲ್ಲಿ ತೇಲುತ್ತಿರುವ ದೃಶ್ಯ ನಗರದ ಹೃದಯ ಭಾಗದಲ್ಲಿ ಇರುವ ಕೋಲಾರಮ್ಮ ಅಮಾನಿಕೆರೆಯಲ್ಲಿಂದು ಕಂಡುಬಂದಿದೆ.

 ಕೋಲಾರಮ್ಮ ಅಮಾನಿಕೆರೆಯಲ್ಲಿ ಎರಡು ಮಹಿಳಾ ಮೃತದೇಹಗಳು ತೇಲುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತಪಟ್ಟ ಮಹಿಳೆಯರಿಗೆ ಅಂದಾಜು 65 ವರ್ಷ ಹಾಗೂ 60 ವರ್ಷಗಳಾಗಿರಬಹುದೆಂದು ಅಂದಾಜಿಸಲಾಗಿದೆ.   

ಸ್ಥಳಕ್ಕೆ ಆಗಮಿಸಿರುವ ಡಿವೈಎಸ್ಪಿ ರಮೇಶ್, ಗಲ್ ಪೇಟೆ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

ಈ ಬಗ್ಗೆ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News