ಕೆಎಸ್ಸಾರ್ಟಿಸಿ ಬಸ್ ಪ್ರಯಾಣದಲ್ಲಿ ಮೊಬೈಲ್‍ಗಳಲ್ಲಿ ಜೋರಾಗಿ ಹಾಡು, ವಾರ್ತೆ ಕೇಳುವಂತಿಲ್ಲ; ಸಾರಿಗೆ ಇಲಾಖೆ ಆದೇಶ

Update: 2021-11-12 11:43 GMT
ಫೈಲ್ ಚಿತ್ರ

ಬೆಂಗಳೂರು, ನ. 12: `ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರೆ ಇನ್ನು ಮುಂದೆ ಬಸ್‍ಗಳಲ್ಲಿ ನೀವು ಮೊಬೈಲ್‍ಫೋನ್ ಬಳಸಿ ಜೋರಾಗಿ ಹಾಡು, ವಾರ್ತೆ, ಸಿನಿಮಾ ನೋಡುವಂತಿಲ್ಲ. ಒಂದು ವೇಳೆ ಬಳಸಿದ್ದೆ ಆದಲ್ಲಿ ಮಾರ್ಗಮಧ್ಯೆ ಬಸ್ಸಿನಿಂದ ಕೆಳಗೆ ಇಳಿಸಲಾಗುವುದು' ಎಂದು ಸುತ್ತೋಲೆ ಹೊರಡಿಸಲಾಗಿದೆ.

ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಮೊಬೈಲ್‍ಫೋನ್‍ಗಳಲ್ಲಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಕೋರ್ಟ್ ಮೊರೆ ಹೋಗಲಾಗಿತ್ತು. ಇದನ್ನು ಗಮನಿಸಿದ ನಿಗಮದ ವ್ಯವಸ್ಥಾಪಕ ನಿರ್ದೆಶಕ ಶಿವಯೋಗಿ ಕಳಸದ, ಇನ್ನು ಮುಂದೆ ಬಸ್‍ಗಳಲ್ಲಿ ಮೊಬೈಲ್‍ಫೋನ್ ಸದ್ದು ಮಾಡುವ ಪ್ರಯಾಣಿಕರಿಗೆ ಸದ್ದು ಮಾಡದಂತೆ ಬಸ್ ನಿರ್ವಾಹಕ ಮನವಿ ಮಾಡಬೇಕು ಎಂದು ಸೂಚಿಸಿದ್ದಾರೆ.

ಅದನ್ನೂ ಲೆಕ್ಕಿಸದೇ ಇದ್ದಾಗ ಅಂತಹ ಪ್ರಯಾಣಿಕರನ್ನು ಪ್ರಯಾಣದ ಮಧ್ಯದಲ್ಲಿಯೇ ಬಸ್ಸಿನಿಂದ ಇಳಿಸಬೇಕು. ಇದಕ್ಕೂ ವಿರೋಧ ವ್ಯಕ್ತಪಡಿಸಿದರೆ ಸ್ಥಳೀಯ ಪೊಲೀಸ್ ಠಾಣೆಗೆ ಪ್ರಯಾಣಿಕ ಅಂತಹವರ ವಿರುದ್ಧ ದೂರು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇದೆ ಮಾದರಿಯ ಸುತ್ತೋಲೆ ಹೊರಡಿಸಿತ್ತು. ಇದೀಗ, ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಮೊಬೈಲ್‍ಗಳಲ್ಲಿ ಜೋರಾಗಿ ಸದ್ದು ಮಾಡುವುದನ್ನು ನಿಷೇಧಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News