ಬೆಂಗಳೂರಿನಲ್ಲಿ ಪ್ರತಿನಿತ್ಯ 140 ಹೊಸ ಕೊರೋನ ಪ್ರಕರಣ: ಕಡ್ಡಾಯವಾಗಿ ಎರಡನೇ ಲಸಿಕೆ ಪಡೆಯುವಂತೆ ಗೌರವ್ ಗುಪ್ತಾ ಮನವಿ

Update: 2021-11-12 16:05 GMT

ಬೆಂಗಳೂರು, ನ.12: ನಗರದಲ್ಲಿ ಪ್ರತಿನಿತ್ಯ 140 ಕೊರೋನ ಪ್ರಕರಣಗಳು ದೃಢವಾಗುತ್ತಿವೆ. ಸೋಂಕಿನ ಪ್ರಮಾಣ ಕಡಿಮೆಯಾಗಲು ಕೊರೋನ ಎರಡನೆಯ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವ ಜನರನ್ನು ಮನವಿ ಮಾಡಿದ್ದಾರೆ. 

ಶುಕ್ರವಾರ ಬಿಬಿಎಂಪಿ ಆವರಣದಲ್ಲಿ ಮಾತನಾಡಿದ ಅವರು, ನಗರವನ್ನು ಕೊರೋನ ಮುಕ್ತವಾಸಗಿಸಬೇಕು. ಆದುದರಿಂದ ಜನರ ಸಹಕಾರ ಬೇಕಾಗಿದೆ. ನಗರದಲ್ಲಿ ಮೊದಲಿನಂತೆ ಚಟುವಟಿಕೆಗಳು ಆರಂಭವಾಗಿವೆ. ಒಂದು ಮನೆಯಲ್ಲಿ ವಾಸಿಸುವ ಒಬ್ಬ ವ್ಯಕ್ತಿಗೆ ಕೊರೋನ ಸೋಂಕು ದೃಢವಾದರೆ, ಆ ಕುಟುಂಬದಲ್ಲಿ ವಾಸಿಸುವ ಮೂರು ಜನರಿಗೆ ಕೊರೋನ ಸೋಂಕು ಕಾಣಿಸಿಕೊಳ್ಳುತ್ತದೆ. ಆದುದರಿಂದ ಲಸಿಕೆ ಪಡೆಯಬೇಕು. ಮೊದಲ ಲಸಿಕೆಯನ್ನು ಪಡೆದವರು ಎರಡನೆಯ ಲಸಿಕೆಯನ್ನು ಪಡೆಯಬೇಕು ಎಂದರು. 

ನಗರದಲ್ಲಿ ನಿರ್ಮಿಸಲಾದ ಅಕ್ರಮ ಕಟ್ಟಡಗಳ ಕುರಿತು ಅವರು ಮಾತನಾಡಿ, ಉಚ್ಚ ನ್ಯಾಯಾಲಯವು ಕೇಳಿರುವ ಅಕ್ರಮ ಕಟ್ಟಡಗಳ ಮಾಹಿತಿಯನ್ನು ಪಾಲಿಕೆಯು ಕಲೆ ಹಾಕುತ್ತಿದೆ. ಎಲ್ಲ ವಲಯಗಳಲ್ಲಿ ಪಾಲಿಕೆಯ ಕಣ್ಣು ತಪ್ಪಿಸಿ ಕಾನೂನುಬಾಹಿರವಾಗಿ ನಿರ್ಮಿಸಲಾದ ಕಟ್ಟಡಗಳನ್ನು ಗುರುತಿಸಿ, ಪಾಲಿಕೆಯು ನ್ಯಾಯಲಯಕ್ಕೆ ವರದಿ ನೀಡುತ್ತದೆ ಎಂದರು. 

ಇನ್ನು ನಗರದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ಪ್ರವೃತ್ತವಾಗಿದೆ. ಹಾಗೆಯೇ ಪೌರಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News