ಮತಾಂತರ ನಿಷೇಧಕ್ಕೆ ಕಾಯ್ದೆ ಜಾರಿ ಮಾಡಲಾಗುವುದು: ಸಿಎಂ ಬೊಮ್ಮಾಯಿ
Update: 2021-11-13 10:28 IST
ಬೆಂಗಳೂರು: ಮತಾಂತರ ನಿಷೇಧಕ್ಕೆ ರಾಜ್ಯದಲ್ಲಿ ಕಾಯ್ದೆಯನ್ನು ಜಾರಿ ಮಾಡಲಾಗುವುದು. ಅದಕ್ಕಾಗಿ ವಿವಿಧ ರಾಜ್ಯಗಳಲ್ಲಿರುವ ಮತಾಂತರ ನಿಷೇಧ ಕಾಯ್ದೆಗಳನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮತಾಂತರ ನಿಷೇಧ ಕಾಯಿದೆ ಜಾರಿಗೆ ಒತ್ತಾಯಿಸಿ ತಮ್ಮನ್ನು ಭೇಟಿಯಾಗಿದ್ದ ಪ್ರಮೋದ್ ಮುತಾಲಿಕ್ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿರುವ ಸಿಎಂ ಬೊಮ್ಮಾಯಿ, ಒತ್ತಾಯ ಪೂರ್ವಕ ಮತಾಂತರ ನಿಷೇಧಕ್ಕಾಗಿ ಪರಿಣಾಮಕಾರಿಯಾದ ಕಾನೂನನ್ನು ಜಾರಿ ಮಾಡುವುದಾಗಿ ತಿಳಿಸಿದ್ದಾರೆ.
'ಇಂದು ಸಮಾಜದಲ್ಲಿ ಮೋಸ, ಬಲವಂತ, ಸಮಾಜದ ಕೆಲವು ಅವಕಾಶ ಬಳಸಿ ಮತಾಂತರ ಮಾಡುವುದು ಗಮನಕ್ಕೆ ಬಂದಿದೆ. ಇದನ್ನು ತಡೆಯಲು ನ್ಯಾಯಾಲಯದಲ್ಲಿ ನಿಲ್ಲವ ಉತ್ತಮ ಮತಾಂತರ ನಿಷೇದ ಕಾಯಿದೆಯನ್ನು ನಾವು ತರುತ್ತೇವೆ' ಎಂದು ಹೇಳಿದ್ದಾರೆ.