ಮೈಸೂರು ಪಾಲಿಕೆಯಿಂದ ನಿಯಮ ಮೀರಿ ಅಧಿಕ ತೆರಿಗೆ ವಸೂಲಿ: ಶಾಸಕ ಸಾ.ರಾ.ಮಹೇಶ್ ಆರೋಪ

Update: 2021-11-13 10:34 GMT

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಕಾನೂನು ಬಾಹಿರ ಹಾಗೂ ಅಧಿಕ ತೆರಿಗೆ ವಸೂಲಿ ಮಾಡುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಮಹಾನಗರ ಪಾಲಿಕೆಯವರು ಅಧಿಕ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಉದ್ಯಮಿಗಳ ಕಚೇರಿಗಳ ಮುಂದೆ ಪಾಲಿಕೆ ತೆರಿಗೆ  ಬಾಕಿ ಬೋಡ್೯ ಹಾಕಿ ಅವಮಾನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲೂ ಈ ಮಟ್ಟದ ಟ್ಯಾಕ್ಸ್ ಹಾಕುತ್ತಿಲ್ಲ, ಆದರೆ ಮೈಸೂರು ಮಹಾನಗರ ಪಾಲಿಕೆ ನಿಯಮ ಮೀರಿ ಟ್ಯಾಕ್ಸ್  ಕಾಕಿ ಹಣ ವಸೂಲಿ ಮಾಡುಯತ್ತಿದ್ದು ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಹರಿಹಾಯ್ದರು.

ಹೆಚ್ಚಿಗೆ ತೆರಿಗೆ ವಸೂಲಿಯಿಂದ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಇವರಿಗೆ ಹೆಚ್ಚಿಗೆ ತೆರಿಗೆ ವಸೂಲಿಗೆ ಅಧಿಕಾರ ಕೊಟ್ಟವರು ಯಾರು? ಈಗಾಗಕೇ ಮೈಸೂರಿನಲ್ಲಿ 8 ಚಿತ್ರಮಂದಿರಗಳು ಮುಚ್ಚಿದೆ. ಉದ್ಯಮಗಳು ನಾಶವಾಗುತ್ತಿದೆ. ಪಾಲಿಕೆ ಮನಸ್ಸೋ ಇಚ್ಚೆ ಟ್ಯಾಕ್ಸ್ ಹಾಕಿದರೆ ಜನರ ಪರಿಸ್ಥಿತಿ ಏನಾಗಬೇಡ ಎಂದು ಪ್ರಶ್ನಿಸಿದರು.

ನನ್ನ ಒಡೆತನದಲ್ಲಿರಯವ ಕನ್ ವೆನ್ಶನ್ ಹಾಲ್ ಗೆ ನಿಯಮ ಪ್ರಕಾರ 4 ಲಕ್ಷ ರೂ. ತೆರಿಗೆ ಕಟ್ಟಬೇಕು, ಆದರೆ ಮೈಸೂರು ಮಹಾನಗರ ಪಾಲಿಕೆ 8.75 ಲಕ್ಷ ತೆರಿಗೆ ವಿಧಿಸಿದೆ. ಅಧಿಕ ತೆರಿಗೆ ವಸೂಲಿ ಬಗ್ಗೆ ಸಾಕಷ್ಟು ಉದ್ಯಮಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾಗಿ ಕಳೆದ 5-6 ವರ್ಷದಿಂದ ತೆರಿಗೆ ಕಟ್ಟಿಲ್ಲ ಎಂದು ಹೇಳಿದರು.

ನಿಯಮದಂತೆ ತೆರಿಗೆ ವಿಧಿಸಿದರೆ ಎಲ್ಲರೂ ತೆರಿಗೆ ಕಟ್ಟುತ್ತಾರೆ. ಆದರೆ ನೀವು ಕಾನೂನು ಬಾಹಿರವಾಗಿ ದಬ್ಬಾಳಿಕೆ ಮಾಡಿದರೆ ತಪ್ಪು, ಅಲ್ಲದೇ ಟ್ಯಾಕ್ಸ್ ಕಟ್ಟಿಲ್ಲ ಎಂದು ಬೋಡ್ ೯ ಹಾಕಿ ಅವಮಾನಿಸುವುದು ಸರಿಯಲ್ಲ‌ ಇದರಿಂದ ಶಾಂತಿ ಭಂಗವಾದರೆ ಕಾನೂನು ಸುವ್ಯಸ್ಥೆ ಹಾಳಾದರೆ ಪಾಲಿಕೆಯೇ ನೇರ ಹೊಣೆಯಾಗುತ್ತದೆ ಎಂದು ಶಾಸಕ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News