ನಾಳೆ ನಡೆಯಬೇಕಿದ್ದ ಕೆಎಸ್‍ಎಲ್‍ಯು ಕಾನೂನು ಪರೀಕ್ಷೆಗಳಿಗೆ ಹೈಕೋರ್ಟ್ ತಡೆ

Update: 2021-11-14 11:58 GMT

ಬೆಂಗಳೂರು, ನ. 14: ಇದೇ ನವೆಂಬರ್ 15ರಿಂದ ನಡೆಯಬೇಕಿದ್ದ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಪರೀಕ್ಷೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಡಿಸೆಂಬರ್ 15ರವರೆಗೆ ತಡೆಯಾಜ್ಞೆ ಇರುವುದರಿಂದ ಅಲ್ಲಿವರೆಗೂ ವಿವಿ ಪರೀಕ್ಷೆಗಳು ರದ್ದಾದಂತಾಗಿವೆ.

ಯುಜಿಸಿ ನಿರ್ದೇಶನದ ಆನುಸಾರ ಕೋವಿಡ್ ಸಂದರ್ಭದಲ್ಲಿ ತರಗತಿಗಳು ಸರಿಯಾಗಿ ನಡೆಯೇದೆ ಇದ್ದುದರಿಂದ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗಳಿಗೆ ಬಡ್ತಿ ನೀಡಬೇಕಿತ್ತು. ಆದರೆ ವಿವಿ ಪರೀಕ್ಷೆ ನಡೆಸಲು ಮುಂದಾಗಿದ್ದು, ಈ ಕ್ರಮ ಸರಿಯಲ್ಲ ಎಂದು ನವೀನ್ ಕುಮಾರ್ ಸೇರಿದಂತೆ 10 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ಏಕಸದಸ್ಯಪೀಠ ಇದೇ ನವೆಂಬರ್ 15ರಿಂದ ನಡೆಯಬೇಕಿದ್ದ ವಿವಿಯ ಪರೀಕ್ಷಾ ವೇಳಾಪಟ್ಟಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News