ದಂಡ ಪಾವತಿಸುವಂತೆ ಕೆಎಸ್ಸಾರ್ಟಿಸಿಗೆ ನೋಟಿಸ್
ಬೆಂಗಳೂರು, ನ. 14: ಕೆಎಸ್ಸಾರ್ಟಿಸಿ ಸೇರಿದಂತೆ ಇನ್ನಿತರೆ ನಿಗಮಗಳ ಬಸ್‍ಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಸಂಬಂಧ 1 ಕೋಟಿ ರೂ.ಗೂ ಅಧಿಕ ದಂಡವನ್ನು ಪಾವತಿಸುವಂತೆ ನಗರ ಸಂಚಾರ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ವಾಹನ ಚಾಲಕರು ಅತೀ ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆ ಸೇರಿದಂತೆ ಇನ್ನಿತರೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು, ಈ ಸಂಬಂಧ ಬಸ್ ಘಟಕಗಳಿಗೆ ಇಲಾಖೆಯಿಂದ ಬಸ್‍ಗಳ ಸಂಖ್ಯೆ ಉಲ್ಲೇಖಿಸಿ ದಂಡ ಪಾವತಿಸುವಂತೆ ನೋಟಿಸ್ ಕಳುಹಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ನಿಗಮಗಳ ಮೇಲೆ 35,048 ಪ್ರಕರಣ ದಾಖಲಾಗಿವೆ. ಇವೆಲ್ಲ ಪ್ರಕರಣಗಳಿಂದದ ಬಿಎಂಟಿಸಿ ಬರೋಬ್ಬರಿ 1,94,83,200 ರೂಪಾಯಿ ದಂಡ ಬಾಕಿ ಉಳಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿಗಮಗಳಿಗೆ ನೋಟಿಸ್ ಕಳಿಸಿದ ಬಳಿಕ ಬಸ್ ಚಾಲಕರಿಗೂ ಕೂಡ ಪ್ರತ್ಯೇಕ ನೋಟಿಸ್ ಕಳುಹಿಸಲಾಗಿದೆ. ಆ ದಂಡದ ಮೊತ್ತವನ್ನು ಚಾಲಕನೇ ಪಾವತಿಸಬೇಕೆಂದು ಘಟಕದ ಮುಖ್ಯಸ್ಥರು ಹೇಳುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.