ಚಾಮರಾಜನಗರ: ಕೆಎಸ್ಸಾರ್ಟಿಸಿ ಬಸ್ ಸಿಗದೆ ವಿದ್ಯಾರ್ಥಿಗಳ ಪರದಾಟ

Update: 2021-11-15 05:08 GMT

ಚಾಮರಾಜನಗರ: ಶಾಲೆಗಳು ಪ್ರಾರಂಭವಾಗಿ ಹದಿನೈದುಗಳು ಕಳೆಯುತ್ತಿದೆ ಕರೋನದ ಭಯದ ವಾತವರಣ ಇಲ್ಲದಾಗಿದೆ ಜಿಲ್ಲಾಡಳಿತದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಪಾಲಕರು ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸುತ್ತಿದ್ದು, ಇದೀಗ ತಾಲೂಕಿನ ಕಾಡಂಚಿನ‌ ಗ್ರಾಮದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಗದಿತ ಸಮಯಕ್ಕೆ ಸಿಗದೆ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. 

ಚಾಮರಾಜನಗರ ತಾಲೂಕಿನ ಕಾಡಂಚಿನ‌ ಗ್ರಾಮಗಳಾದ ಮಲ್ಲೆದೇವನ ಹಳ್ಳಿ ಹಾಗೂ ಸೋಲಿಗರು ವಾಸಿಸುವ ಹಿತ್ತಲಗುಡ್ಡ.ಮತ್ತು ಪುಟ್ಟನ ಗ್ರಾಮದ ಮಕ್ಕಳು ಈಗ ಶಾಲೆಗೆ ಹೋಗಲು ಬಸ್ಸಿಲ್ಲದೆ ಖಾಸಗಿ ಆಟೋಗಳನ್ನೇ ಅವಲಂಬಿಸಬೇಕಾಗಿದೆ.

ಕೋವಿಡ್ ಗೂ ಮುನ್ನ ಕಾಡಂಚಿನ ಗ್ರಾಮಗಳಿಗೆ ಪ್ರತಿದಿನ 3 ಬಸ್ಸುಗಳು ಬರುತ್ತಿದ್ದವು.ಈಗ ಶಾಲಾ ಕಾಲೇಜುಗಳು ಪ್ರಾರಂಭವಾದರೂ ಬೆಳಿಗ್ಗೆ ನಿಗದಿತ ಸಮಯ ಮೀರಿ ಒಂದೇ ಬಸ್ಸು ಬರುವುದರಿಂದ ವಿದ್ಯಾರ್ಥಿಗಳು ಶಾಲಾ ಸಮಯಕ್ಕೆ ತೆರಳಲು ಸಮಸ್ಯೆ ಯಾಗುತ್ತಿದೆ.

ಕಳೆದ ವಾರ ಬಸ್ ವ್ಯವಸ್ಥೆ ಗಾಗಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ರೂಟ್ ಬಸ್ಸ್ ಗಳನ್ನು ಮತ್ತೆ ಸಂಚಾರ ಮಾಡಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳ ಪೋಷಕರ ಆರೋಪ.

ವಿದ್ಯಾರ್ಥಿಗಳ ಮತ್ತು ರೈತಾಪಿ ಜನರ ಹಿತದೃಷ್ಟಿಯಿಂದ ಲಾದರು ಚಾಮರಾಜನಗರ ಕಾಡಂಚನ ಗ್ರಾಮಗಳಿಗೆ ಮತ್ತೆ ಕೆ ಎಸ್ ಆರ್ ಟಿ ಬಸ್ ಸಂಚಾರ ಮಾಡುವಂತಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News