×
Ad

ಮುಂಡಗೋಡ : ಕೆರೆಗೆ ಬಿದ್ದ ಕಾರು; ಸಿ.ಆರ್.ಪಿ.ಎಫ್ ಸಿಬ್ಬಂದಿ, ಪತ್ನಿ ಮೃತ್ಯು

Update: 2021-11-15 18:18 IST

ಮುಂಡಗೋಡ : ನಿಯಂತ್ರಣ ತಪ್ಪಿದ ಕಾರು ಕೆರೆಗೆ ಬಿದ್ದ ಪರಿಣಾಮ ಸಿ.ಆರ್.ಪಿ.ಎಫ್ ಸಿಬ್ಬಂದಿ ಮತ್ತು ಅವರ ಪತ್ನಿ ಮೃತಪಟ್ಟ ಘಟನೆ ಪಟ್ಟಣದ ಅಮ್ಮಾಜಿ ಕೆರೆಯಲ್ಲಿ ಸೋಮವಾರ ಸಂಭವಿಸಿದೆ.

ಮೃತರನ್ನು ಸಿ.ಆರ್.ಪಿ.ಎಫ್ ಸಿಬ್ಬಂದಿ ರಾಜು ವರ್ಗಿಸ್ ಹಾಗೂ ಅವರ ಪತ್ನಿ ಬ್ಲೇಸಿ ರಾಜು ವರ್ಗಿಸ್ ಎಂದು ಗುರುತಿಸಲಾಗಿದೆ.

ಮುಂಡಗೋಡಿನ ಕರವಳ್ಳಿ ಗ್ರಾಮದಲ್ಲಿ  ಸಂಬಂಧಿಕರೋರ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಂದ ಆಗಮಿಸುತ್ತಿದ್ದಾಗ ಈ ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೆರೆಯಲ್ಲಿ ಬಿದ್ದಿದ್ದ ಕಾರನ್ನು ಕ್ರೇನ್ ಮುಖಾಂತರ ಮೇಲಕ್ಕೆತ್ತಿ ಮೃತದೇಹವನ್ನು ಹೊರತೆಗೆದಿದ್ದಾರೆ.

ಘಟನಾ ಸ್ಥಳಕ್ಕೆ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್‍ಐ ಬಸವರಾಜ ಮಬನೂರ, ಎನ್.ಡಿ.ಜಕ್ಕಣ್ಣವರ ಹಾಗೂ ಪೊಲೀಸ ಸಿಬ್ಬಂದಿ ಸೇರಿದಂತೆ ಅಗ್ನಿಶಾಮಕ ದಳ ಭೇಟಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News