ಏಕಾಏಕಿ ಪಿಯು ಪರೀಕ್ಷೆ ನಡೆಸುವುದು ಸೂಕ್ತವಲ್ಲ: ಲೋಕೇಶ್ ತಾಳೀಕಟ್ಟೆ
Update: 2021-11-15 21:29 IST
ಬೆಂಗಳೂರು, ನ,15: ವಿದ್ಯಾರ್ಥಿಗಳು ಇನ್ನೂ ದಾಖಲಾಗುತ್ತಿದ್ದರೂ, ಪಿಯು ಮಂಡಳಿ ಮಧ್ಯ ವಾರ್ಷಿಕ ಪರೀಕ್ಷಾ ದಿನಾಂಕವನ್ನು ಪ್ರಕಟ ಮಾಡಿದೆ. ಕಾಲೇಜು ಆರಂಭವಾಗಿ ಮೂರು ತಿಂಗಳು ಮಾತ್ರ ಕಳೆದಿದ್ದು, 45-50ರಷ್ಟು ಪಠ್ಯಕ್ರಮದಲ್ಲಿ ಶೇ.20ರಷ್ಟು ಕೂಡ ಕಲಿತಿಲ್ಲ. ಹೀಗಿರುವಾಗ ಏಕಾಏಕಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ರುಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳೀಕಟ್ಟೆ ಆರೋಪಿಸಿದ್ದಾರೆ.
ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪಿಯು ಮಂಡಳಿ ಪೂರ್ವ ಸಿದ್ಧತೆಯು ಇಲ್ಲದೇ, ಪರೀಕ್ಷೆ ನಡೆಸುತ್ತಿರುವುದು ಆತುರದ ನಿರ್ಧಾರವಾಗಿದೆ. ಕೋವಿಡ್ ಮೂರನೇ ಅಲೆ ಭೀತಿ ಇದ್ದರೆ ಪರೀಕ್ಷೆ ನಡೆಸಲಿ. ಯಾವುದೇ ವಿದ್ಯಾರ್ಥಿ ವಿದ್ಯಾಭ್ಯಾಸದಿಂದ ವಂಚಿತವಾಗಬಾರದು. ಆದುದರಿಂದ ಪೂರ್ವ ಸಿದ್ಧತೆಯಿಲ್ಲದೆ ಪರೀಕ್ಷೆಯನ್ನು ನಡೆಸಬಾರದು ಎಂದು ತಿಳಿಸಿದರು.