ಪಾಂಡವಪುರ: ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರುಬಿಟ್ಟ ಗ್ರಾಮಸ್ಥರು

Update: 2021-11-15 17:00 GMT

ಪಾಂಡವಪುರ, ನ.15: ತಾಲೂಕಿನ ಅಂತನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವ ಮೂಲಕ ಅರಣ್ಯ ಇಲಾಖಾಧಿಕಾರಿಗಳು ಗ್ರಾಮಸ್ಥರ ಆತಂಕವನ್ನು ದೂರಮಾಡಿದ್ದಾರೆ.

ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಎರಡು ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ. ಕಳೆದ ಒಂದು ತಿಂಗಳಿನಿಂದ ಕುರಿ, ಮೇಕೆಗಳನ್ನು ತಿಂದು ತಾಲೂಕಿನ ಅಂತನಹಳ್ಳಿ, ಬಸ್ತಿಹಳ್ಳಿ, ಕನ್ನಂಬಾಡಿ, ಅಲ್ಪಹಳ್ಳಿ, ಗಿರಿಯಾರಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರಿಗೆ ಚಿರತೆ ಭೀತಿ ಉಂಟು ಮಾಡಿತ್ತು.

ಗ್ರಾಮಗಳಿಗೆ ದಾಳಿ ಮಾಡುತ್ತಿದ್ದ ಚಿರತೆಯು ಕುರಿ, ಮೇಕೆಗಳನ್ನು ತಿಂದು ಪರಾರಿಯಾಗುತ್ತಿತ್ತು ಎನ್ನಲಾಗಿದೆ. ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಸತ್ತ ಕುರಿಯೊಂದನ್ನು ಬೋನಿನಲ್ಲಿಟ್ಟು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಚಿರತೆ ಸೆರೆಯಿಂದಾಗಿ ಅಂತನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎಚ್.ಪುಟ್ಟಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ ಶಿವಸಿದ್ದು, ಅರಣ್ಯ ರಕ್ಷಕರಾದ ಭರತ್, ಮಂಜುನಾಥ್, ಧನಂಜಯ, ಅರಣ್ಯ ವೀಕ್ಷಕರಾದ ಕುಮಾರ, ಲವ, ವೀರಭದ್ರಪ್ಪ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News