×
Ad

ಮಿನಿ ವಿಧಾನಸೌಧ ಇನ್ನು ಮುಂದೆ 'ತಾಲೂಕು ಆಡಳಿತ ಸೌಧ': ಸರಕಾರ ಆದೇಶ

Update: 2021-11-16 18:43 IST

ಬೆಂಗಳೂರು, ನ.16: ರಾಜ್ಯ ಸರಕಾರವು ಕಂದಾಯ ಇಲಾಖೆಯ ತಾಲೂಕು ಮಟ್ಟದಲ್ಲಿನ ಮಿನಿ ವಿಧಾನಸೌಧ ಕಟ್ಟಡಗಳ ಹೆಸರನ್ನು ‘ತಾಲೂಕು ಆಡಳಿತ ಸೌಧ’ ಎಂದು ಬದಲಾಯಿಸಿ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲ ತಾಲೂಕುಗಳಲ್ಲಿರುವ ಮಿನಿ ವಿಧಾನಸೌಧ ಎಂಬ ತಾಲೂಕು ಆಡಳಿತ ಕಚೇರಿಗಳನ್ನು ರಾಜ್ಯದ ಭಾಷಾ ನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ, ನಾನು-ನುಡಿ ಸಂಸ್ಕೃತಿಗೆ ಪೂರಕವಾಗಿ ‘ತಾಲೂಕು ಆಡಳಿತ ಸೌಧ’ ಎಂದು ಬದಲಿಸುವುದು ಸೂಕ್ತ ಎಂದು ಸರಕಾರ ತಿಳಿಸಿದೆ.

ಪ್ರಸ್ತುತ ಇರುವ ‘ಮಿನಿ’ ಎಂಬ ಪದ ಆಂಗ್ಲಭಾಷೆಯಾಗಿದ್ದು ತಾಲೂಕು ಮಟ್ಟದ ಆಡಳಿತ ಕಟ್ಟಡಗಳಲ್ಲಿ ಯಾವುದೆ ಕಲಾಪಗಳನ್ನಾಗಲಿ ಕಾಯಿದೆ, ಕಾನೂನುಗಳನ್ನಾಗಲಿ ರೂಪಿಸುವ ಶಕ್ತಿ ಕೇಂದ್ರಗಳಲ್ಲದ ಕಾರಣ‘ಮಿನಿ ವಿಧಾನಸೌಧ’ ಎಂಬುದರ ಬದಲಾಗಿ ‘ತಾಲೂಕು ಆಡಳಿತ ಸೌಧ’ ಎಂದು ಬದಲಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸಾರ್ವಜನಿಕರು ಮತ್ತು ಗಣ್ಯ ವಕ್ತಿಗಳು ಕೋರಿದ್ದಾರೆ.

ಪ್ರಸ್ತುತ ರಾಜ್ಯದ ಎಲ್ಲ ತಾಲೂಕುಗಳಲ್ಲಿರುವ ‘ಮಿನಿ ವಿಧಾನಸೌಧ’ ಎಂಬ ಹೆಸರಿನ ಬದಲು ‘ತಾಲೂಕು ಆಡಳಿತ ಸೌಧ’ ಎಂದು ನಾಮಾಂಕಿತಗೊಳಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯದ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು, ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಎಲ್ಲ ತಹಶೀಲ್ದಾರರಿಗೆ ಕಂದಾಯ ಇಲಾಖೆ ಸೂಚನೆ ನೀಡಿದೆ.

ರಾಜ್ಯದ ಎಲ್ಲ ತಾಲೂಕುಗಳಲ್ಲಿರುವ ಮಿನಿ ವಿಧಾನಸೌಧವನ್ನು ತಾಲೂಕು ಆಡಳಿತ ಸೌಧ ಎಂದು ಬದಲಿಸಲು ರಾಜ್ಯ ಬಿಜೆಪಿ ಸರಕಾರ ನಿರ್ಧರಿಸಿದೆ. ಕನ್ನಡ ನಾಣು, ನುಡಿ, ಸಂಸ್ಕೃತಿಗೆ ಪೂರಕವಾಗಿ ಮಿನಿ ಎಂಬ ಆಂಗ್ಲ ಭಾಷೆಯ ಪದದ ಬದಲಿಗೆ ಕನ್ನಡ ಪದ ಬಳಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News