ಸರಕಾರ ಸಚಿವರ ಶವ ಬಿಸಾಡಿತು, ಮುಸ್ಲಿಮರು ಮಾದರಿಯಾದರು: ಡಿ.ಕೆ.ಶಿವಕುಮಾರ್

Update: 2021-11-16 15:00 GMT

ಬೆಂಗಳೂರು, ನ.16: ಕೋವಿಡ್ ಸಂದರ್ಭದಲ್ಲಿ ಮೃತರಿಗೆ ಅಂತ್ಯ ಸಂಸ್ಕಾರ ನೆರವೇರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲಗೊಂಡಿದಲ್ಲದೆ, ಕೇಂದ್ರ ಸಚಿವ ಸುರೇಶ್ ಅಂಗಡಿ ಶವವನ್ನೆ ಬಿಸಾಡಿತು. ಆದರೆ, ಮುಸ್ಲಿಮರು ಮೃತದೇಹಗಳ ಗೌರವ ಅಂತ್ಯಕ್ರಿಯೆ ನಡೆಸಿ ಮನುಕುಲಕ್ಕೆ ಮಾದರಿಯಾದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.  

ಕೋವಿಡ್ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಮಾನವೀಯತೆಯ ಕಾರ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರಿಗೆ ನಾನು ವಿಶೇಷ ಗೌರವ ನೀಡುತ್ತೇನೆ. ಸ್ವತಃ ಸರಕಾರವೇ ಮೃತದೇಹಗಳನ್ನು ಜೆಸಿಬಿ ಮೂಲಕ ಎಸೆಯಿತು. ಇನ್ನೂ, ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಮೃತದೇಹವನ್ನು ಬಿಸಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಮುಸ್ಲಿಮರು ಕೋವಿಡ್ ಸಂದರ್ಭದಲ್ಲಿ ಮಾಡಿದ ಸಮಾಜ ಸೇವೆಯೂ ಭಾರತ ಸಂಸ್ಕೃತಿ, ಮಾನವೀಯತೆ ಸಂಸ್ಕೃತಿ ಕಾಪಾಡಿ ಸಮಾಜಕ್ಕೆ ಗೌರವ ತಂದಿದೆ ಎಂದ ಅವರು, ಅಲ್ಪಸಂಖ್ಯಾತರು ಎಂದರೆ ಬರೀ ಮುಸ್ಲಿಮರಲ್ಲ, ಎಲ್ಲರೂ ಜೊತೆಯಾಗುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News