ಹಾಸನ: ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಿಗ
Update: 2021-11-16 20:11 IST
ಹಾಸನ: ಹೊಸದಾಗಿ ಪೆಟ್ರೋಲ್ ಬಂಕ್ ತೆಗೆಯುವುದಕ್ಕೆ ಎನ್.ಒ.ಸಿ. ನೀಡಲು ಬೇಡಿಕೆ ಇಡಲಾಗಿದ್ದ 50 ಸಾವಿರ ಲಂಚವನ್ನು ಸ್ವೀಕರಿಸುವಾಗ ಗ್ರಾಮಲೆಕ್ಕಿಗ ಸಂಜೀವ್ ಅವರು ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದಿದೆ.
ಅರಕಲಗೂಡು ತಾಲೂಕಿನಲ್ಲಿ ಹೊಸದಾಗಿ ಪೆಟ್ರೋಲ್ ಬಂಕ್ ನಿರ್ಮಿಸುವ ನಿಟ್ಟಿನಲ್ಲಿ ನವ್ಯ ಎಂಬವರು ಎನ್.ಒ.ಸಿ. ಪಡೆಯಲು ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿದಾಗ ಗ್ರಾಮಲೆಕ್ಕಿಗ ಸಂಜೀವ್ ಎಂಬುವರಿಂದ ಒಟ್ಟು ಒಂದುವರೆ ಲಕ್ಷದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂದ ನವ್ಯ ಅವರು ಎಸಿಬಿ ಇಲಾಖೆಗೆ ದೂರು ನೀಡಿದ್ದು, ಎಸಿಬಿಯ ಡಿವೈಎಸ್ಪಿ ಸತೀಶ್ ನೇತೃತ್ವದ ಇನ್ಸ್ ಪೆಕ್ಟರ್ ವೀಣಾ, ಶಿಲ್ಪಾ ಅವರ ತಂಡ ಇಂದು ಮೊದಲ ನವ್ಯ ಅವರು ಮೊದಲ ಕಂತಿನ ಹಣ 50 ಸಾವಿರ ರೂಗಳನ್ನು ಖಾಸಗಿ ಹೋಟೆಲೊಂದರಲ್ಲಿ ಗ್ರಾಮ ಲೆಕ್ಕಿಗ ಸಂಜೀವ್ ಗೆ ಕೊಡುವ ವೇಳೆ ಸಾಕ್ಷಿ ಸಮೇತವಾಗಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.