ಮಡಿಕೇರಿ: ಗುಂಪು ಹಲ್ಲೆ, ಕೊಲೆ ಬೆದರಿಕೆ ಆರೋಪ; ದೂರು ದಾಖಲು
Update: 2021-11-16 20:47 IST
ಮಡಿಕೇರಿ ನ.16 : ವಾಹನ ಅಡ್ಡಗಟ್ಟಿದ ಗುಂಪೊಂದು ಹಲ್ಲೆ ನಡೆಸಿ ಕೊಲೆ ಬೆದರಿಕೆವೊಡ್ಡಿರುವುದಾಗಿ ಆರೋಪಿಸಿ ಮಾದಾಪುರ ಆಶ್ರಯ ಕಾಲೋನಿ ನಿವಾಸಿ ಎಂ.ಇ.ರಶೀದ್ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನ.15ರಂದು ಸ್ಕೂಟರ್ ನಲ್ಲಿ ವ್ಯಾಪಾರಕ್ಕಾಗಿ ಸುಂಟಿಕೊಪ್ಪ ಕಡೆ ತೆರಳುತ್ತಿದ್ದಾಗ ಜಾರುಕೊಲ್ಲಿ ಬಳಿ ಮಾದಾಪುರದ ಕೆಲವರು ಪಿಕ್‍ಅಪ್ ವಾಹನದಲ್ಲಿ ಬಂದು ಅಡ್ಡಗಟ್ಟಿ ಸಂಬಂಧವಿಲ್ಲದ ವಿಚಾರವನ್ನು ಪ್ರಸ್ತಾಪಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ನನ್ನ ಬಳಿ ಇದ್ದ ರೂ.3,500 ನ್ನು ಬಲವಂತವಾಗಿ ಕಸಿದುಕೊಂಡು ಹೋಗಿದ್ದಾರೆ. ಅಲ್ಲದೆ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ರಶೀದ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.