×
Ad

ಕೆಎಸ್ಸಾರ್ಟಿಸಿಗೆ ಮತ್ತೊಂದು ಪ್ರಶಸ್ತಿ

Update: 2021-11-16 20:54 IST

ಬೆಂಗಳೂರು, ನ.16: ಮಂಗಳವಾರ ನಡೆದ ಸ್ಕೋಚ್ 76ನೇ ಸ್ಟೇಟ್ಸ್ ಗವರ್ನನ್ಸ್  ವರ್ಚುವಲ್ ಸಮಾರಂಭದಲ್ಲಿ ಕೆಎಸ್‍ಆರ್‍ಟಿಸಿ ಉಪಕ್ರಮವಾದ "ಸಾರಿಗೆ ಸುರಕ್ಷಾ"ಗೆ  ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ-2021 ಪ್ರಶಸ್ತಿಯನ್ನು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ.ಶಿವಯೋಗಿ ಸಿ.ಕಳಸದ ಅವರಿಗೆ ಪ್ರದಾನ ಮಾಡಲಾಯಿತು.

ನಿಗಮವು ಕೋವಿಡ್ ಸಮಯದಲ್ಲಿ ಹಲವಾರು ಸಾರ್ವಜನಿಕ- ಆರೋಗ್ಯ ಸ್ನೇಹಿ ಉಪಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದು, ‘ಸಾರಿಗೆ ಸುರಕ್ಷಾ' ಉಪಕ್ರಮವನ್ನು  ಪುತ್ತೂರು ವಿಭಾಗದ 38 ಹಳ್ಳಿಗಳ ಸುಮಾರು 4900ಜನರು ಕಳೆದ 81 ದಿನಗಳಲ್ಲಿ ಉಪಯೋಗ ಪಡೆದುಕೊಂಡಿದ್ದಾರೆ ಇದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಇದು ದೇಶದ ಇತರೆ ಸಾರಿಗೆ ಸಂಸ್ಥೆಗಳಿಗೆ ಮಾದರಿಯಾಗಿದೆ.

ವ್ಯವಸ್ಥಾಪಕ ನಿರ್ದೇಶಕರು ಈ ಪ್ರಶಸ್ತಿಯನ್ನು ನಿಗಮದ ಸಮಸ್ತ ಸಿಬ್ಬಂದಿಗಳಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News