×
Ad

ಅನುದಾನ ನೀಡದೆ ಕೇವಲ ಹೆಸರು ಬದಲಿಸಿ ಸಾಧನೆ ತೋರಿಸಲು ಹೊರಟಿರುವುದು ಹಾಸ್ಯಾಸ್ಪದ: ಕಾಂಗ್ರೆಸ್ ಟೀಕೆ

Update: 2021-11-16 23:13 IST

ಬೆಂಗಳೂರು: 'ಮಿನಿ ವಿಧಾನಸೌಧ' ಹೆಸರನ್ನು 'ತಾಲೂಕು ಆಡಳಿತ ಸೌಧ' ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿರುವ ರಾಜ್ಯ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್, ಅನುದಾನ ನೀಡದೆ ಹೆಸರು ಬದಲಿಸಿ ಸಾಧನೆ ತೋರಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,  'ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಗಳಿಗೆ ಹೆಸರು ಬದಲಿಸಿ ಅನುದಾನ ಕಡಿತಗೊಳಿಸಿದವರು ಈಗ ಮಿನಿ ವಿಧಾನಸೌಧಗಳಿಗೆ 'ತಾಲೂಕು ಆಡಳಿತ ಸೌಧ' ಎಂದು ಮರುನಾಮಕರಣ ಮಾಡಿ 'ನಾಮ್ ಬದಲೋ ಸರ್ಕಾರ್' ಎಂಬ ಯುಪಿ ಮಾದರಿಯಲ್ಲಿ ಸಾಗಿದೆ. ತಾಲೂಕು ಅಡಳಿತಗಳಿಗೆ ಅನುದಾನ ನೀಡದೆ ಕೇವಲ ಹೆಸರು ಬದಲಿಸಿ ಸಾಧನೆ ತೋರಿಸಲು ಹೊರಟಿರುವುದು ಹಾಸ್ಯಾಸ್ಪದ' ಎಂದು ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News