×
Ad

ಹುಣಿಸೆಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಸಾವು

Update: 2021-11-18 22:58 IST

ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡಗೆ ಸೇರಿದ ಹುಣಿಸೆಹಳ್ಳಿ ಕೆರೆಗೆ ಕಿಡಿಗೇಡಿಗಳು ವಿಷಪ್ರಾಶಾನ ಮಾಡಿದ್ದಾರೆನ್ನಲಾಗಿದ್ದು , ಸಾವಿರಾರು ಮೀನುಗಳು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಮೀನುಗಳ ಸಾವಿನಿಂದ ಕೆರೆಯ ಗುತ್ತಿಗೆದಾರರಾದ ಮದನ್‌ಶೇಖರ್ ತೀರ್ವ ಆಘಾತಗೊಂಡಿದ್ದು, ಸೂಕ್ತ ಪರಿಹಾರಕ್ಕಾಗಿ ಸಂಬಂಧ ಪಟ್ಟ ಇಲಾಖೆಯವರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಕಳೆದ 3 ವರ್ಷಗಳಿಂದ ಮೀನುಗಾರಿಕೆಗೆ ಈ ಕೆರೆಯನ್ನು ಗುತ್ತಿಗೆ ಪಡೆದಿರುವ ಮದನ್ ಶೇಖರ್ ಅವರು ಈ ಕೆರೆಯನ್ನೇ ನಂಬಿ ಜೀವನ ನಡೆಸುತ್ತಿದ್ದು, ಸುಮಾರು 10 ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಈ ಕೆರೆಯ ಮೀನುಗಾರಿಕೆಗೆ ವ್ಯಹಿಸಿದ್ದಾರೆ. ಕೆರೆಗೆ ವಿಮೆ ಮಾಡಿಸಲು ಇಲಾಖೆಗೆ ಕೇಳಿದರೂ ಯಾರು ಸ್ಪಂದಿಸಿಲ್ಲ. ಈ ನಷ್ಟಕ್ಕೆ ಇಲಾಖೆಯವರು ಸೂಕ್ತ ಪರಿಹಾರ ಒದಗಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಪರಿಹಾರವನ್ನು ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಕೆರೆಯಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮೀನು ಮರಿಗಳನ್ನು ಸಾಕಾಣೆ ಮಾಡುತ್ತಿದ್ದು, ಈಗ ಅವೆಲ್ಲವೂ ಕೂಡ ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾವನಪ್ಪುತ್ತಿವೆ. ಕೆರೆಯ ನೀರು ಮೀನುಗಳ ಸಾವಿನಿಂದ ದುರ್ನಾಥ ಬೀರುತ್ತಿದೆ.

ಮೀನುಗಾರಿಕಾ ಇಲಾಖೆಯವರು ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಮೀನಿನ ಮಾರಣ ಹೋಮಕ್ಕೆ ನಿಖರ ಕಾರಣ ಪ್ರಯೋಗಾಲಯದ ಪಲಿತಾಂಶದಲ್ಲಿ ತಿಳಿದುಬರಲಿದೆ. ಆದಷ್ಟು ಬೇಗ ಈ ಘಟನೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ. ಸತ್ತಿರುವ ಮೀನನ್ನು ಕೆರೆಯಿಂದ ಹೊರತೆಗೆದು, ಮಲಿನವಾಗಿರುವ ನೀರನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಬೇಕಿದೆ ಎಂದು  ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News